ಸಿರಿಯಾದಲ್ಲಿ ರಷ್ಯಾ ವಾಯುಪಡೆಯಿಂದ ದಾಳಿ 
ವಿದೇಶ

೧೫೦೦ ಸಿರಿಯನ್ ಐ ಎಸ್ ಅಡಗುತಾಣ ಮತ್ತು ತೈಲ ನಿಕ್ಷೇಪಗಳ ಮೇಲೆ ರಷ್ಯಾ ಬಾಂಬ್ ದಾಳಿ

ಕಳೆದ ೯ ದಿನಗಳಿಂದ ಸಿರಿಯಾದ ಸುಮಾರು ೧೫೦೦ ಸ್ಥಳಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ವಾಯುಪಡೆ ದಾಳಿ ನಡೆಸಿದೆ.

ಮಾಸ್ಕೋ: ಕಳೆದ ೯ ದಿನಗಳಿಂದ ಸಿರಿಯಾದ ಸುಮಾರು ೧೫೦೦ ಸ್ಥಳಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ವಾಯುಪಡೆ ದಾಳಿ ನಡೆಸಿದೆ.

೧೪೫೮ ಕಡೆ ಬಾಂಬ್ ದಾಳಿ ನಡೆಸಿರುವುದಾಗಿ ರಷ್ಯಾದ ಭದ್ರತಾ ಪಡೆ ತಿಳಿಸಿದ್ದು, ಅವುಗಳೆಲ್ಲವೂ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿದ್ದವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಈ ವಾಯು ದಾಳಿಯಿಂದ ಉಗ್ರಗಾಮಿಗಳ ಅತಿ ದೊಡ್ಡ ಅಡಗುತಾಣವನ್ನು ಧ್ವಂಸ ಮಾಡಿದ್ದೇವೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ತೈಲ ಸಾಕಾಣೆಗೆ ಬಳಸಲಾಗುವ ಸುಮಾರ್ ೪೦ ಟ್ರಕ್ಕುಗಳನ್ನು ಈ ದಾಳಿಯಲ್ಲಿ ನಾಶಪಡಿಸಲಾಗಿದೆ ಅಲ್ಲದೆ ೧೨ ಪೆಟ್ರೋಲ್ ಪಂಪ್ಗಳು ಮತ್ತು ೮ ತೈಲ ನಿಕ್ಷೇಪಗಳನ್ನು ಕೂಡ ಗುರಿಯಾಗಿಸಿ ದಾಳಿ ಮಾಡಲಾಗಿದೆ.

ಇತ್ತೀಚೆಗಷ್ಟೇ ಸಿರಿಯಾ ಮತ್ತು ಟರ್ಕಿ ಗಡಿಯಲ್ಲಿ ರಷ್ಯಾದ ಯುದ್ಧವಿಮಾನವನ್ನು ಟರ್ಕಿ ಹೊಡೆದುರುಳಿಸಿದ್ದಕ್ಕೆ ರಷ್ಯಾ ಮಿಲಿಟರಿಯಲ್ಲಿ ಉದ್ವೇಗ ಹೆಚ್ಚಿದ್ದು, ತನ್ನೆಲ್ಲ ಬಾಂಬರ್ ವಿಮಾನಗಳಿಗೆ ರಕ್ಷಣೆ ಒದಗಿಸಲು ಸುಖೋಯ್ ೩೦ ಯುಧಾ ವಿಮಾನಗಳನ್ನು ನಿಯೋಜಿಸಿದೆ.

ಐಸ್ ಹಿಡಿತದ ತೈಲ ನಿಕ್ಷೇಪಗಳಿಂದ ತೈಲವನ್ನು ಟರ್ಕಿ ಕಳ್ಳ ಸಾಗಾಣೆ ಮಾಡುತ್ತಿದೆ ಎಂದು ರಷ್ಯ ಕಳೆದ ವಾರ ಆರೋಪಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್