ಸಾಂದರ್ಭಿಕ ಚಿತ್ರ 
ವಿದೇಶ

ಚೈನೀಸ್ ಭಾಷೆಯಲ್ಲಿ ಹಾಡು ಬಿಡುಗಡೆ ಮಾಡಿದ ಇಸ್ಲಾಮಿಕ್ ಸ್ಟೇಟ್

ಚೈನಾದ ಮುಸ್ಲಿಮರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಹೋರಾಡುವಂತೆ ಕರೆ ಕೊಟ್ಟು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಮ್ಯಾಂಡರಿನ್ ಭಾಷೆಯಲ್ಲಿ ಹಾಡೊಂದನ್ನು

ಬೀಜಿಂಗ್: ಚೈನಾದ ಮುಸ್ಲಿಮರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಹೋರಾಡುವಂತೆ ಕರೆ ಕೊಟ್ಟು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಮ್ಯಾಂಡರಿನ್ ಭಾಷೆಯಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ಐಎಸ್ ಪ್ರಚಾರ ಅಂತರ್ಜಾಲ ತಾಣವಾದ 'ಜಿಹಾದಾಲಜಿ'ಯಲ್ಲಿ ಈ ಹಾಡನ್ನು ಭಾನುವಾರ ಪ್ರಕಟಿಸಿದ್ದು, ಚೈನಾದಲ್ಲಿ ತನ್ನ ನೆಲೆಯನ್ನು ಬಲಪಡಿಸಲು ಯತ್ನಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

'ನಾವು ಮುಜಾಹಿದ್' ಎಂಬ ಸಾಹಿತ್ಯವುಳ್ಳ ೪ ನಿಮಿಷದ ಈ ಹಾಡಿನಲ್ಲಿ "ಯುದ್ಧಭೂಮಿಯಲ್ಲಿ ಮರಣಹೊಂದುವುದು ನಮ್ಮ ಕನಸು", "ನಾವು ಮುಂದುವರೆಯುವುದನ್ನು ಯಾವ ಶಕ್ತಿಯೂ ನಿಲ್ಲಿಸಲು ಸಾಧ್ಯವಿಲ್ಲ" "ನಿಮ್ಮ ಆಯುಧಗಳನ್ನು ಎತ್ತಿಕೊಂಡು ತಿರುಗಿ ಬೀಳಿ" ಮತ್ತು "ನಾಚಿಕೆಯಿಲ್ಲದ ಶತ್ರು ಭೀತಿಯುತನಾಗುತ್ತಾನೆ" ಎಂಬ ಸಾಲುಗಳಿವೆ.

"ಜಾಗತಿಕ ಜಿಹಾದಿಗಳಿಗೆ ಉಪಯುಕ್ತವಾಗುವ ಹೊಸ ಪ್ರಾಥನಿಕ ತಾಣ ಇದು" ಎಂದು 'ಜಿಹಾದಾಲಜಿ' ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.

ಜನರನ್ನು ಹುರಿದುಂಬಿಸಲು ಮತ್ತು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಐಎಸ್ ಇದೇ ಮೊದಲ ಬಾರಿಗೆ ಚೈನೀಸ್ ಭಾಷೆಯಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!