ಇಸೀಸ್ ಉಗ್ರರಿಂದ ಇರಾಕ್ ನ ತೈಲೋತ್ಪನ್ನ ಕಳ್ಳಸಾಗಣೆ: ಇರಾಕ್ ಪ್ರಧಾನಿ
ಇಸ್ಲಾಮಿಕ್ ಸ್ಟೇಟ್ ಉಗ್ರರು ತೈಲೋತ್ಪನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ ಎಂದು ಇರಾಕ್ ನ ಪ್ರಧಾನಿ ಹೈದರ್ ಅಲ್ ಹೇಳಿದ್ದಾರೆ.
ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಉಗ್ರರು ತೈಲೋತ್ಪನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ ಎಂದು ಇರಾಕ್ ನ ಪ್ರಧಾನಿ ಹೈದರ್ ಅಲ್ ಹೇಳಿದ್ದಾರೆ.
ಟರ್ಕಿ ಮೂಲಕ ಇರಾಕ್ ನ ತೈಲ ಉತ್ಪನ್ನಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಇರಾಕ್ ನ ಬಹುತೇಕ ತೈಲ ಉತ್ಪನ್ನಗಳನ್ನು ಟರ್ಕಿ ಮೂಲಕ ಇಸೀಸ್ ಉಗ್ರರು ಕಳ್ಳಸಾಗಾಣಿಕೆ ಮಾಡುತ್ತಿದ್ದು ಇಸೀಸ್ ಸಂಘಟನೆ ಕಳ್ಳಸಾಗಣಿಕೆ ತಡೆಗಟ್ಟಲು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಇರಾಕ್ ನ ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಜರ್ಮನಿಯ ವಿದೇಶಾಂಗ ಸಚಿವರಾದ ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್ ಅವರೊಂದಿಗೆ ಇರಾಕ್ ಪ್ರಧಾನಿ ಮಾತುಕತೆ ನಡೆಸಿದ್ದು ಇಸೀಸ್ ಉಗ್ರರ ನಿರ್ಮೂಲನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ಟರ್ಕಿ ಹಾಗೂ ಇರಾಕ್ ನ ದ್ವಿಪಕ್ಷೀಯ ಸಂಬಂಧ ಹಾಳಾಗಿರುವ ಬಗ್ಗೆ ಹೈದರ್ ಅಲ್ ಅಬಾದಿ ಅವರು ಮಾಹಿತಿ ನೀಡಿದ್ದು ಇರಾಕ್ ನ ಅನುಮತಿ ಇಲ್ಲದೇ ಉತ್ತರ ಇರಾಕ್ ಗೆ ಟರ್ಕಿ ತರಬೇತಿಗಾಗಿ ಹೆಚ್ಚುವರಿ ಪಡೆಗಳನ್ನು ಕಳಿಸಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಟರ್ಕಿ ವಿರುದ್ಧ ಆರೋಪ ಮಾಡಿದ್ದ ರಷ್ಯಾ ಸಹ ಇಸ್ಲಾಮಿಕ್ ಸ್ಟೇಟ್ ನ ತೈಲ ವ್ಯಾಪಾರದಲ್ಲಿ ಟರ್ಕಿಯ ಅಧ್ಯಕ್ಷ ಹಾಗೂ ಅಧ್ಯಕ್ಷರ ಕುಟುಂಬ ತೊಡಗಿದೆ ಎಂದು ಹೇಳಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.