ಲಾಹೋರ್: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ಪಡೆದ ಅಜ್ಮಲ್ ಕಸಬ್ ಬದುಕಿದ್ದಾನಂತೆ! ಹೀಗೆಂದು ಕಸಬ್ಗೆ ಪಾಠ ಹೇಳಿದ ಮೇಷ್ಟ್ರು ಪಾಕಿಸ್ತಾನದ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ.
ಅಜ್ಮಲ್ ಕಸಬ್ ಪ್ರಾಥಮಿಕ ಶಿಕ್ಷಣ ಮಾಡಿದ್ದ ಎನ್ನಲಾದ ಫರೀದ್ಕೋಟ್ನ ಶಾಲೆಯಲ್ಲಿ ಶಿಕ್ಷಕರಾದ ಮುದಾಸ್ಸಿರ್ ಲಖ್ವಿ, ತಾನು ಕಸಬ್ಗೆ ಪಾಠ ಹೇಳಿರುವುದಾಗಿ, ಆತ ಈಗಲೂ ಜೀವಂತವಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗೆ ಕಸಬ್ನನ್ನು ಕೋರ್ಟ್ ವಶಕ್ಕೆ ಒಪ್ಪಿಸುವುದಾಗಿಯೂ ಹೇಳಿಕೊಂಡಿದ್ದಾರಂತೆ.
ಹೆಡ್ ಮಾಸ್ಟರ್ ಈ ಹೇಳಿಕೆ ತನಿಖಾ ಅಧಿಕಾರಿಗಳಿಗೆ ಭಾರೀ ಕಿರಿಕಿರಿ ಉಂಟು ಮಾಡಿದೆ.ಇನ್ನು ಕಸಬ್ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಎಂಬುದರ ಬಗ್ಗೆ ಸರಿಯಾದ ದಾಖಲೆಗಳನ್ನು ಒದಗಿಸಿದರೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಮಾಬಾದ್ನ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಭಯೋತ್ಪಾದನಾ ನಿಗ್ರಹ ಕೋರ್ಟ್ನಲ್ಲಿ ಮುಂಬೈ ದಾಳಿ ತನಿಖೆ ಸಂದರ್ಭ ಅಚ್ಚರಿಯ ಬೆಳವಣಿಗೆ ನಡೆದಿದೆ. ಈತ ಮುಂಬೈ ದಾಳಿ ಸಂಬಂಧ ನಡೆಯುತ್ತಿರುವ ವಿಚಾರಣೆಯ ಪ್ರಮುಖ ಸಾಕ್ಷಿಯಾಗಿದ್ದಾರೆ.
ಇತ್ತ ಅದೇ ದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮ ಸ್ವರಾಜ್ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕ್ನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಮುಂಬೈ ದಾಳಿ ಪ್ರಕರಣದ ವಿಚಾರಣೆ ಬೇಗ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.