ಮಾಸ್ಕೊ: ಸೋವಿಯತ್ ರಿಪಬ್ಲಿಕ್ ನ ಭಾಗವಾಗಿದ್ದ ಉಕ್ರೇನ್ ರಷ್ಯಾಗೆ ನೀಡಬೇಕಿದ್ದ ೩ ಬಿಲಿಯನ್ ಯು ಎಸ್ ಡಾಲರ್ ಗಳನ್ನು ನೀಡಲು ವಿಫಲವಾದರೆ ಆ ದೇಶದ ವಿರುದ್ಧ ದ್ಯಾವೆ ಹೂಡುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಆದೇಶಿಸಿದ್ದಾರೆ.
"ಮುಂದುವರೆಯಿರಿ, ಕೋರ್ಟ್ ಗೆ ಎಳೆಯಿರಿ" ಎಂದು ಪುಟಿನ್, ಹಣಕಾಸು ಸಚಿವ ಆಂಟನ್ ಸಿಲುವನಾವ್ ಅವರಿಗೆ ಸೂಚಿಸಿದ್ದಾರೆ. ಈ ತಿಂಗಳಿಗೆ ಉಕ್ರೇನ್ ಆ ಸಾಲ ಹಿಂದಿರುಗಬೇಕಿದೆ.
ಈ ವಿವಾದದೊಂದಿಗೆ ಅಂತರಾಷ್ಟ್ರೀಯ ವಿತ್ತ ನಿಧಿ (ಐ ಎಂಎಫ್) ಉಕ್ರೇನಿಗೆ ೧೭.೫ ಬಿಲಿಯನ್ ಡಾಲರ್ ಸಹಾಯ ನಿಧಿ ನೀಡಲು ಮುಂದಾಗಿದ್ದ ಕ್ರಮಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ.