ಸಂಗ್ರಹ ಚಿತ್ರ 
ವಿದೇಶ

ಬಡತನಕ್ಕೆ ದೂಡಲಿದೆಯೇ ಹವಾಮಾನ ಬದಲಾವಣೆ

ಹವಾಮಾನದಲ್ಲಾಗುತ್ತಿರುವ ಬದಲಾವಣೆ ಭಾರತವನ್ನು ಬಡತನದ ಕೂಪಕ್ಕೆ ದೂಡಬಿಡಬಹುದೇ? ಇಂಥ ಆತಂಕವನ್ನು...

ನವದೆಹಲಿ: ಹವಾಮಾನದಲ್ಲಾಗುತ್ತಿರುವ ಬದಲಾವಣೆ ಭಾರತವನ್ನು ಬಡತನದ ಕೂಪಕ್ಕೆ ದೂಡಬಿಡಬಹುದೇ? ಇಂಥ ಆತಂಕವನ್ನು ಪುಷ್ಟೀಕರಿಸುವಂತೆ ವಿಶ್ವ ಬ್ಯಾಂಕ್ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದೆ. 
ಹವಾಮಾನದಲ್ಲಾಗುತ್ತಿರುವ ಬದಲಾವಣೆ ಮುಂದಿನ ಹದಿನೈದು ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅನಾಹುತ ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ವರದಿ ಹೇಳಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, 45 ದಶಲಕ್ಷ ಜನ ಬಡತನದ ಕೂಪಕ್ಕೆ ಬೀಳಲಿದ್ದಾರೆ. 
ಹವಾಮಾನ ಬದಲಾವಣೆ ಹೊರತಾಗಿಯೂ ಭಾರತದಲ್ಲಿ 2030ರ ಹೊತ್ತಿಗೆ 189 ದಶಲಕ್ಷ ಮಂದಿ ಬಡತನಕ್ಕೆ ಸಿಲುಕಲಿದ್ದು, ಈ ಸಂಖ್ಯೆಯನ್ನು ಹವಾಮಾನ ಬದಲಾವಣೆಯ ಪರಿಣಾಮಗಳು 234 ದಶಲಕ್ಷಕ್ಕೆ ಏರಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು `ಇಂಡಿಯಾ ಸ್ಪೆಂಡ್' ವರದಿ ಮಾಡಿದೆ. 
ಮೂರು ಸಮಸ್ಯೆ: ಹವಾಮಾನ ಸಮಸ್ಯೆ ಭಾರತವನ್ನು ಮೂರು ರೀತಿ ಬಾಧಿಸಲಿದೆ. ಕೃಷಿ ಉತ್ಪಾದನೆ ಕುಂಠಿತವಾಗಲಿದೆ. ಏರುತ್ತಿರುವ ತಾಪಮಾನದಿಂದ ಸಾಂಕ್ರಾಮಿಕ ರೋಗಗಳು ಹರಡಲಿದ್ದು, 2030ರ ಹೊತ್ತಿಗೆ ಜಗತ್ತಿನ ಶೇ. 5%ರಷ್ಟು ಜನರಿಗೆ ಮಲೇರಿಯಾ ಮತ್ತು ಶೇ. 10% ರಷ್ಟು ಜನರಿಗೆ ಡಯೇರಿಯಾದಂಥ ಕಾಯಿಲೆಗಳು ಬಾಧಿಸಲಿವೆ. 
ತಾಪಮಾನ ಪರಿಣಾಮ ಕಾರ್ಮಿಕರ ಶಕ್ತಿ ಕುಂಠಿತವಾಗಿ ಕೈಗಾರಿಕೆಗಳಲ್ಲಿ ಶೇ. 13ರಷ್ಟು ಉತ್ಪಾದನೆ ಕುಸಿಯಲಿದೆ. ಜನ ಅಪೌಷ್ಠಿಕತೆಗೆ ಸಿಲುಕಲಿದ್ದಾರೆ. ದುಡಿಮೆಯ ಅರ್ಧ ಹಣವನ್ನು ಜನ ಚಿಕಿತ್ಸೆಗಾಗಿಯೇ ಮೀಸಲಿಡುವ ಸಂದಿಗಟಛಿತೆ ಎದುರಾಗಲಿದೆ. ಕ್ಷಾಮ, ಅತಿವೃಷ್ಟಿ, ಅನಾವೃಷ್ಟಿ, ನೆರೆ, ಅತಿಯಾದ ತಾಪಮಾನದಿಂದ ಜನರು ನಿರಾಶ್ರಿತರಾಗಲಿದ್ದಾರೆ. 
ಮೋದಿಗೆ ಒಬಾಮ ಕರೆ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಹವಾಮಾನ ಬದಲಾವಣೆ ಕುರಿತು ಚರ್ಚಿಸಿದ್ದಾರೆ. ಈ ಸಂಗತಿಯನ್ನು ವೈಟ್ ಹೌಸ್ ಬುಧವಾರ ತಿಳಿಸಿದೆ. 
ಪ್ಯಾರಿಸ್‍ನಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳ ಸ್ಥಿತಿಗತಿಗಳ ಕುರಿತು ಮೋದಿ ಅವರೊಂದಿಗೆ ಒಬಾಮ ಚರ್ಚಿಸಿದ್ದಾರೆ. ಅಲ್ಲದೆ, ಹವಾಮಾನ ಬದಲಾವಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ಏನು ಮಾಡಬೇಕು?
  • ಪರಿಸರ ಮಾಲಿನ್ಯ ತಡೆಗೆ ಸರ್ಕಾರ ಕಠಿಣ ನೀತಿ ರೂಪಿಸಬೇಕಿದೆ. ಅಲ್ಲದೆ ದೀರ್ಘಾವಧಿಯ ಪರಿಸರ ಸುಧಾರಣಾ ಕ್ರಮ ಕೈಗೊಳ್ಳಬೇಕಿದೆ. ಹೀಗೆ ಮಾಡುವುದರಿಂದ ಮುಂದಾಗಲಿರುವ ಅನಾಹುತಗಳು ಅಲ್ಪಮಟ್ಟಿಗೆ ತಗ್ಗಲಿವೆ. ಇದರ ಜತೆಗೆ ಜನರಿಗೆ ಸೂಕ್ತ ಭದ್ರತೆ, ನೆರವು ಕಲ್ಪಿಸಬೇಕು
  • ಕೃಷಿಯಲ್ಲಿಯೂ ಕ್ರಾಂತಿಕಾರಕ ಬದಲಾವಣೆ ತರಬೇಕು. ಮಿಶ್ರ ಬೇಸಾಯ ಕೈಗೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಲ್ಲದೆ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಹೀಗೆ ಮಾಡುವುದರಿಂದ ರೈತರನ್ನು ಬಡತನದಿಂದ ತಪ್ಪಿಸಬಹುದು. ಇನ್ನು ನೆರೆ ನಿಗ್ರಹಕ್ಕೆ ಮೂಲಸೌಲಭ್ಯಕಲ್ಪಿಸುವುದೇ ಪರಿಹಾರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT