ಕ್ಯಾಲಿಫೋರ್ನಿಯಾ: ಇಂಥದೊಂದು ಅರಮನೆ ಕೊಳ್ಳುವ ಕನಸಿದ್ದರೆ ಈಗಲೇ ನನಸಾಗಿಸಿಕೊಳ್ಳಿ. ನನಸಾಗದಿದ್ದರೂ ಓಕೆ, ಒಮ್ಮೆ ಕನಸು ಕಂಡುಬಿಡಿ.
ಕರ್ನಾಟಕ ಮೂಲದ ಖ್ಯಾತ ಉದ್ಯಮಿ ಕುಮಾರ್ ಮಳವಳ್ಳಿ ತಮ್ಮ ಐಷಾರಾಮಿ ಬೃಹತ್ ಬಂಗಲೆಯನ್ನು ಮಾರಲು ಮುಂದಾಗಿದ್ಧಾರೆ. ಕ್ಯಾಲಿಫೋರ್ನಿಯಾ ಎಸ್ಟೇಟ್‍ನ 8 ಎಕರೆ ವಿಸ್ತೀರ್ಣದ ಈ ಮನೆಯ ಮಾರಾಟ ಬೆಲೆ ಎಷ್ಟು ಗೊತ್ತೆ? 88 ದಶಲಕ್ಷ ಡಾಲರ್. ಅಂದರೆ ಕೇವಲ ರು.591ಕೋಟಿ! ಈಗ ಯೋಚಿಸಿ ಹೇಳಿ. ಕೊಳ್ಳುತ್ತೀರಾ? ಕೊಳ್ಳುವ ಕನಸಾದರೂ ಕಾಣುತ್ತೀರಾ? ಕುಮಾರ್ ಮಳವಳ್ಳಿ(72) ಬ್ರೋಕೇಡ್ ಕಮ್ಯುನಿಕೇಷನ್ ಸಿಸ್ಟಂನ ಸಹಸಂಸ್ಥಾಪಕರು. ಈಗ ಬಹುಕೋಟಿಯ ವಿಕೆಆರ್‍ಎಂ ಎಂಬ ವೆಂಚರ್ ಕ್ಯಾಪಿಟಲ್ ಕಚೇರಿಯನ್ನು ನಡೆಸುತ್ತಿದ್ಧಾರೆ.
ಆದರೆ ಕ್ಯಾಲಿಫೋರ್ನಿಯಾ ಬಳಿಯ ಲಾಸ್ ಆಲ್ಟೋಸ್ ಹಿಲ್ಸ್ ಮೇಲಿರುವ ಈ ಭವ್ಯಸೌಧವನ್ನು ದಿಡಿsೀರ್ ಮಾರುತ್ತಿರುವುದಕ್ಕೆ ಕಾರಣ ಮಾತ್ರ ಬಹಳ ಸರಳವಿದೆ. ದೂರದಲ್ಲಿರುವ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯಲೆಂದು ಈ ಮನೆ ತೊರೆಯುವ ನಿರ್ಧಾರಕ್ಕೆ ಬಂದಿದ್ಧಾರಂತೆ. 2004ರಲ್ಲಿ ಈ ಎಸ್ಟೇಟ್ ನಿರ್ಮಾಣವಾಗಿತ್ತು. ಐಷಾರಾಮಿ ಬಂಗಲೆ ಮನೆಯಿಂದಲೇ ಕಚೇರಿ ನಡೆಸುವಂತೆ ಒಂದು ಎಕ್ಸಿಕ್ಯೂಟಿವ್ ಸೆಂಟರ್ ಕೂಡ ಇದೆ.
-ಇಂಡೋರ್ ಈಜುಕೊಳ, ಸ್ವಿಮ್ ಅಪ್ ಬಾರ್ ಕೂಡ ಇರುವ ಈ ಭವನದ ಛಾವಣಿಗಳು ಮಳೆ ಬೀಳುತ್ತಿದ್ದಂತೆಯೆೀ ತಾನಾಗಿ ಮುಚ್ಚಿಕೊಳ್ಳುತ್ತವೆ.
- 6 ಕಾರ್ ಗರಾಜುಗಳು, ಸಂಗೀತಗಾರರು ಕಛೇರಿ ನಡೆಸುತ್ತಿರುವಂತಿರುವ, ಮಕ್ಕಳು ಆಟವಾಡುತ್ತಿರುವಂತಿರುವ ಶಿಲ್ಪಕಲೆಗಳು, ಹೀಗೆ ಹಲವು ಸೌಂದರ್ಯ ಹೆಚ್ಚಿಸುವ ವಿಷಯಗಳೂ ಇವೆ.
-ಮನೆಯ ಪ್ರತಿ ಕೋಣೆಯಿಂದಲೂ ನೇರವಾಗಿ ಹೊರ ಹೋಗಲು ವ್ಯವಸ್ಥೆಯಿರುವಂತೆ ಮಾಡಲಾಗಿದೆ. ಸ್ಯಾಂಟಾ ಬಾರ್ಬರಾ ಶೈಲಿಯೆೀ ಈ ಮನೆಯ ನಿರ್ಮಾಣಕ್ಕೆ ಸ್ಫೂರ್ತಿಯಂತೆ!
ಈ ಮನೆಯ ವೈಶಿಷ್ಟ್ಯವೇನು?
-20x400 ಚದರ ಅಡಿಯ ಈ ಮನೆಯಲ್ಲಿ 5 ಬೆಡ್ರೂಮ್, ಒಂದು ಬೃಹತ್ ಹೋಮ್ ಥಿಯೆೀಟರ್, ಸುಸಜ್ಜಿತ ಜಿಮ್, 5 ಸಾವಿರ ಬಾಟಲಿಗಳನ್ನು ಜೋಡಿಸಿಡಬಲ್ಲ ವೈನ್ ಸೆಲ್ಲಾರ್ ಇದೆ.
-1024 ಚದರ ಅಡಿಯ ರಿಸೆಪ್ಷನ್ ಸೆಂಟರ್, ವಿಶಾಲ ಕಿಚನ್, ಬೆಲ್ ಟವರ್‍ಗಳೇ ಒಂದೊಂದು ಸಭಾಂಗಣದಷ್ಟು ದೊಡ್ಡದಿವೆ.