ಸಂವಾದದ ಬಳಿಕ ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಸೆಲ್ಫಿ ಸ್ಟೈಲ್.
ನವದೆಹಲಿ: ಗೂಗಲ್‍ನ ಮೊಬೈಲ್ ಆಂಡ್ರಾಯ್ಡ್ -6 ಅವತರಣಿಕೆ ಬರುವ ಮುನ್ನ ಅದಕ್ಕೆ ಮೈಸೂರು ಪಾಕ್ ಅಥವಾ ಮೋತಿಚೂರ್ ಲಡ್ಡು ಎಂದು ಹೆಸರಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಮಾರ್ಷ್‍ಮೆಲೋ ಎಂದಾಯಿತು.
ಇದೀಗ ಭಾರತೀಯ ಸುಂದರ್ ಪಿಚೈ ಗೂಗಲ್ ಸಾರಥ್ಯ ವಹಿಸಿರುವುದರಿಂದ ಆಂಡ್ರಾಯ್ಡ್ ಮುಂದಿನ ಅವತರಣಿಕೆ ಭಾರತೀಯ ತಿನಿಸಿನ ಹೆಸರು ಅಂಟಿಸಿಕೊಂಡೇ ಬರಬಹುದು ಎಂಬ ಹೊಸ ನಿರೀಕ್ಷೆ ಮೂಡಿದೆ.
ಇದನ್ನು ಸ್ವತಃ ಸುಂದರ್ ಪಿಚೈ ಅವರೇ ಖಚಿತಪಡಿಸಿದ್ದು, ದೆಹಲಿ ವಿವಿಯ ಎಸ್‍ಆರ್ ಕಾಮರ್ಸ್ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ ಕಿಕ್ಕಿರಿದಿದ್ದ 1800ಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, ಈ ನಿಟ್ಟಿನಲ್ಲಿ ಗೂಗಲ್ ಆನ್‍ಲೈನ್ ಜನಮತ ಸಂಗ್ರಹಿಸಲಿದ್ದು, ಭಾರತೀಯರು ಅತಿಹೆಚ್ಚು ಮಂದಿ ಅದರಲ್ಲಿ ಭಾಗವಹಿಸಿದ್ದಲ್ಲಿ ಆಂಡ್ರಾಯ್ಡ್ ಎನ್ ಅಥವಾ ಪಿ ಅವತರಣಿಕೆಗೆ ಭಾರತೀಯ ಹೆಸರನ್ನಿಡಲಾಗುವುದು ಎಂದಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪೇಡಾ ಹೆಸರಿಡಬಹುದು ಎಂಬ ಮಾತುಗಳು ಕೇಳಿಬಂದವು. ಆಗ ಆಂಡ್ರಾಯ್ಡ್ ಪಿ-ಗೆ ಪಾಯಸಂ ಎಂದೂ ಕರೆಯಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ, ಅವರ ಲಘು ಚಟಾಕಿಯೇ ನಿಜವಾಗಿ ಮಾರ್ಷ್‍ಮೆಲೋ ನಂತರದ ಸ್ಥಾನ ಪಾಯಸಂದೂ ಆದರೆ ಅಚ್ಚರಿಯಿಲ್ಲ!
ಇದೇ ಸಂದರ್ಭದಲ್ಲಿ ಅವರು, ಮನುಕುಲ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಗತ್ತಿನ ಯಾರು ಬೇಕಾದರೂ ಗೂಗಲ್ ಜೊತೆ ಕೈಜೋಡಿಸಬಹುದು. ತಾವೂ ಕೂಡ ಕಂಪನಿಯ ಆ ಬದ್ಧತೆ ನೋಡಿಯೇ ಆಕರ್ಷಿತರಾಗಿದ್ದು. ಗೂಗಲ್ ಕೇವಲ ಕಂಪ್ಯೂಟರ್ ಸಂಬಂಧಿತ ಸಂಸ್ಥೆಯಲ್ಲ.
ಇಂಗ್ಲಿಷ್ ತಿಳಿಯದ ಕೋಟ್ಯಂತರ ಜನರಿಗೆ ಇಂಟರ್‍ನೆಟ್ ತಲುಪಿಸುವ ನಿಟ್ಟಿನಲ್ಲೂ ಸಂಸ್ಥೆ ಗುರಿ ಹೊಂದಿದೆ ಎಂದರು. ಭಾರತದಲ್ಲಿ ಗೂಗಲ್ ಭವಿಷ್ಯದ ಯೋಜನೆಗಳ ಕುರಿತು, ದೇಶದಲ್ಲಿ 30 ವಿವಿಗಳ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ 20 ಲಕ್ಷ ಆಂಡ್ರಾಯ್ಡ್ ಡೆವಲಪರ್ಸ್‍ಗೆ ತರಬೇತಿ ನೀಡಲಾಗುವುದು.
ಇದನ್ನು ಮುಂದಿನ 3 ವರ್ಷಗಳಲ್ಲಿ ಸಾಧಿಸುವ ಗುರಿ ಇದೆ ಎಂದರು. ವಿದ್ಯಾರ್ಥಿ ಸಂವಾದದ ಬಳಿಕ ಪಿಚೈ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos