ಸಂಗ್ರಹ ಚಿತ್ರ 
ವಿದೇಶ

ಭಾರತೀಯ ಸಿಂಹ ತಳಿ ಅಳಿವಿನಂಚಿನಲ್ಲಿ

ಭಾರತ ಮತ್ತು ಆಫ್ರಿಕ ದೇಶಗಳಲ್ಲಿ ಕಂಡು ಬರುವ ಒಂದು ಜಾತಿಯ ಸಿಂಹದ ಸಂತತಿಯನ್ನು ಅಳಿವಿನಂಚಿನಲ್ಲಿರುವ ಸಿಂಹಸಂತತಿಗಳ...

ವಾಷಿಂಗ್ಟನ್: ಭಾರತ ಮತ್ತು ಆಫ್ರಿಕ ದೇಶಗಳಲ್ಲಿ ಕಂಡು ಬರುವ ಒಂದು ಜಾತಿಯ ಸಿಂಹದ ಸಂತತಿಯನ್ನು ಅಳಿವಿನಂಚಿನಲ್ಲಿರುವ ಸಿಂಹಸಂತತಿಗಳ ಪಟ್ಟಿಗೆ ಅಮೆರಿಕ ಸೇರಿಸಿದೆ. 
ಕಳೆದ ಎರಡು ದಶಕಗಳಲ್ಲಿ ದಿಢೀರ್ ಅವುಗಳ ಸಂಖ್ಯೆ ಕುಂಠಿತಗೊಂಡಿರುವುದನ್ನು ಗಮನಿಸಿ ಅಮೆರಿಕದ ಫಿಷ್ ಆ್ಯಂಡ್ ವೈಲ್ಡ್ ಲೈಫ್ ಸರ್ವಿಸ್ ಸಿಂಹಗಳ ತಳಿಯ ಪಟ್ಟಿಯನ್ನು ಸೇರಿಸಿದೆ. ಸದ್ಯಕ್ಕೆ ಈ ಜಾತಿಯ ಒಟ್ಟು 1400 ಸಿಂಹಗಳಷ್ಟೇ ಉಳಿದಿದ್ದು, ಭಾರತದಲ್ಲಿ 523 ಸಿಂಹಗಳಿದ್ದರೆ, ಆಫ್ರಿಕದ ಕಾಡುಗಳಲ್ಲಿ 900 ಕೇಸರಿಗಳು ಉಳಿದಿವೆ. 
ಎರಡು ದಶಕಗಳಲ್ಲಿ ಸುಮಾರು ಶೇ.43ರಷ್ಟು ಸಿಂಹಸಂಖ್ಯೆ ಇಳಿಕೆಯಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. 
ಪಟ್ಟಿಗೆ ಈ ಸಂತತಿ ಸೇರ್ಪಡೆಯ ನಂತರ ಅಂತಿಮ ಸಿಂಹ ನೀತಿ ಪ್ರಕಟವಾಗಲಿದೆ. ಇದನ್ನು ಒಳಗೊಂಡ ಫೆಡರಲ್ ರಿಜಿಸ್ಟರ್ ಡಿ.23ಕ್ಕೆ ಬಿಡುಗಡೆಯಾಗಲಿದ್ದು, ಬರುವ ವರ್ಷ ಜ.22ರಿಂದ ಅಧಿಕೃತ ಘೋಷಣೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!