ವಿದೇಶ

ಭಯೋತ್ಪಾದನೆ ಕುರಿತು ಲೇಖನ: ಚೀನಾದಿಂದ ಫ್ರಾನ್ಸ್ ಪತ್ರಕರ್ತೆಯ ಗಡಿಪಾರು

Srinivasamurthy VN

ಬೀಜಿಂಗ್: ಭಯೋತ್ಪಾದನೆ ಮತ್ತು ಅಲ್ಪ ಸಂಖ್ಯಾತರ ಕುರಿತಂತೆ ಲೇಖನ ಪ್ರಕಟ ಮಾಡಿದ ಹಿನ್ನಲೆಯಲ್ಲಿ ಫ್ರಾನ್ಸ್ ಪತ್ರಕರ್ತೆಯನ್ನು ಚೀನಾ ಸರ್ಕಾರ ಗಡಿಪಾರು ಮಾಡಿದೆ.

ಚೀನಾದ ಮುಸ್ಲಿಂ ಉಯ್‌ಘೂರ್ ಸಮುದಾಯದವರ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ನೀತಿಯ ಕುರಿತಂತೆ ಬಹಿರಂಗವಾಗಿಯೇ ಲೇಖನ, ಸುದ್ದಿಗಳನ್ನು ಬರೆದಿದ್ದ ಫ್ರಾನ್ಸ್‌ನ ಎಲ್‌ಓಬ್ಸ್  ಮ್ಯಾಗಜಿನ್ ನ ಉರ್ಸುಲ ಗೌಥಿಯರ್ ಎಂಬ ವರದಿಗಾರ್ತಿಯನ್ನು ಚೀನಾ ಸರ್ಕಾರ ಗಡಿ ಪಾರು ಮಾಡಿದೆ. ಉರ್ಸುಲ ಗೌಥಿಯರ್ ಮೂಲತಃ ಚೀನಾ ಮೂಲದವಳೇ ಆಗಿದ್ದು, ಫ್ರಾನ್ಸ್‌ನ  ಎಲ್‌ಓಬ್ಸ್ ಮ್ಯಾಗಜಿನ್ ನ ಚೀನಾದ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.

ಮ್ಯಾಗಸಿನ್‌ನಲ್ಲಿ ವರದಿಗಾರ್ತಿ ಉರ್ಸುಲಾ ಚೀನಾದಲ್ಲಿರುವ ಉಯ್‌ಘೂರ್ ಅಲ್ಪಸಂಖ್ಯಾತರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿ ಲೇಖನಗಳನ್ನು ಬರೆದಿದ್ದಳು. ಇದರಿಂದ  ಸರ್ಕಾರಕ್ಕೆ ಭಾರೀ ಮುಜುಗರವಾಗಿತ್ತು. ಚೀನಾದ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು. ಚೀನಾದಲ್ಲೂ ಭಯೋತ್ಪಾದಕತೆ ಇದೆ ಎಂಬ ಈ ಲೇಖನ ಚೀನಾ ಸರ್ಕಾರಕ್ಕೆ  ತೀವ್ರ ಅಸಹನೆ ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪತ್ರಕರ್ತೆ ಉರ್ಸುಲಾಳನ್ನು ಚೀನಾದಿಂದ ಹೊರಹಾಕಿದೆ.

SCROLL FOR NEXT