ಯುವಕನ ರಕ್ಷಿಸಿದ ಟರ್ಕಿ ಅಧ್ಯಕ್ಷ
ಆತ್ಮಹತ್ಯೆಗೆ ಮುಂದಾಗಿದ್ದ ಯುವಕ ನನ್ನು ಟರ್ಕಿಯ ಅಧ್ಯಕ್ಷ ರೆಸೆಪ್ ತಯೀಪ್ ಇಡೋ ಗನ್ ರಕ್ಷಿಸಿದ್ದಾರೆ...
ಇಸ್ತಾಂಬುಲ್: ಆತ್ಮಹತ್ಯೆಗೆ ಮುಂದಾಗಿದ್ದ ಯುವಕ ನನ್ನು ಟರ್ಕಿಯ ಅಧ್ಯಕ್ಷ ರೆಸೆಪ್ ತಯೀಪ್ ಇಡೋಗನ್ ರಕ್ಷಿಸಿದ್ದಾರೆ. ಸ್ತಾಂಬುಲ್ ನ ಬಾಸ್ಪರಸ್ ಸೇತುವೆ ಪ್ರದೇಶಲ್ಲಿ ಅಧ್ಯಕ್ಷ ತಯೀಪ್ ತೆರಳುತ್ತಿದ್ದರು.
ಆಗ ಯುವಕ ಸೇತುವೆಯಿಂದ ಧಮುಕಲು ಮುಂದಾಗಿದ್ದ. ಅದನ್ನು ಕಂಡ ಅವರು ಆತನನ್ನು ತಡೆಯಲು ಮುಂದಾದರು. ಆತ ಒಪ್ಪದಿದ್ದರೂ ಸ್ವತಃ ತಯೀಪ್ ಅವರೇ ಸೇತುವೆ ಬಳಿ ತೆರಳಿ ಆತನ ಮನವೊಲಿಸಿ ಆತ್ಮಹತ್ಯೆ ಯತ್ನ ಕೈಬಿಡುವಂತೆ ಮಾಡಿದರು.
ಕೌಟುಂಬಿಕ ಕಾರಣದಿಂದ ಆತ ಆತಹತ್ಯೆಗೆ ಮುಂದಾಗಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಘಟನೆಗೆ ರಷ್ಯವೇ ಕಾರಣ ಎಂದು ಟರ್ಕಿ ಪ್ರಧಾನಿ ಪ್ರತಿಪಾದಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.