ನೇಪಾಳಕ್ಕೆ ೧.೪ ಮಿಲಿಯನ್ ಲೀಟರ್ ಹೆಚ್ಚುವರಿ ಇಂಧನ ನೀಡಲಿರುವ ಚೈನಾ
ನೇಪಾಳಕ್ಕೆ ೧೦ ಮಿಲಿಯನ್ ಯೆನ್ ಮೌಲ್ಯದ ೧.೪ ಮಿಲಿಯನ್ ಲೀಟರ್ ಇಂಧನವನ್ನು ಅನುದಾನವಾಗಿ ನೀಡಲು ಚೈನಾ ಸರ್ಕಾರ ಒಪ್ಪಿಕೊಂಡಿದೆ ಎಂದು ನೇಪಾಳದ ಉಪ ಪ್ರಧಾನಿ ಹಾಗೂ ವಿದೇಶಾಂಗ
ಖಟ್ಮಂಡು: ನೇಪಾಳಕ್ಕೆ ೧೦ ಮಿಲಿಯನ್ ಯೆನ್ ಮೌಲ್ಯದ ೧.೪ ಮಿಲಿಯನ್ ಲೀಟರ್ ಇಂಧನವನ್ನು ಅನುದಾನವಾಗಿ ನೀಡಲು ಚೈನಾ ಸರ್ಕಾರ ಒಪ್ಪಿಕೊಂಡಿದೆ ಎಂದು ನೇಪಾಳದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಕಮಲ್ ಥಾಪಾ ಮಂಗಳವಾರ ಹೇಳಿದ್ದಾರೆ.
ನೂತನ ಸಂವಿಧಾನದ ವಿರುದ್ಧ ಮಾದೇಸಿ ಪ್ರತಿಭಟನೆಯಿಂದ ಭಾರತ ಮತ್ತು ನೇಪಾಳದ ನಡುವೆ ಹೆಚ್ಚಳಗೊಂಡಿರುವ ಉದ್ವಿಜ್ಞತೆಯಿಂದ ಭಾರತದ ಗಡಿಯಲ್ಲಿ ಇಂಧನ ಮತ್ತು ಅಗತ್ಯ ವಸ್ತುಗಳ ಸಾಗಾಣೆ ಸ್ಥಗಿತಗೊಂಡಿದ್ದು, ನೇಪಾಳದಲ್ಲಿ ಇಂಧನದ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಅಕ್ಟೋಬರ್ ನಲ್ಲಿ ಚೈನಾ ೧.೩ ಮಿಲಿಯನ್ ಲೀಟರ್ ಪೆಟ್ರೋಲ್ ನೀಡಿತ್ತು.
ಚೈನಾ ನೀಡಿದ್ದ ಇಂಧನವನ್ನು ಟಿಬೆಟ್ಟಿನ ಕೆರುಂಗ್ ನಿಂದ ಖಟ್ಮಂಡುವಿಗೆ ನೇಪಾಳ ಇಂಧನ ಸಂಸ್ಥೆ ಸಾಗಾಣೆ ಮಾಡಿತ್ತು.
ಈ ಒಪ್ಪಂದದಿಂದ ಐದು ದಶಕಗಳಿಂದ ನೇಪಾಳಕ್ಕೆ ಇಂಧನ ಒದಗಿಸುತ್ತಿದ್ದ ಭಾರತದ ಏಕಸ್ವಾಮ್ಯತೆ ಅಂತ್ಯವಾಗಿದೆ. ಬೇರೆ ಕ್ಷೇತ್ರಗಳಲ್ಲೂ ಕೂಡ ನೇಪಾಳ ಚೈನಾಗೆ ನಿಕಟವಾಗುತ್ತಿರುವುದು ವಿದೇಶಾಂಗ ನೀತಿಯ ಪಂಡಿತರಲ್ಲಿ ಬೆರಗು ಮೂಡಿಸಿದೆ.
ಚೈನಾದಿಂದ ಇಂಧನ ಆಮದು ಮಾಡಿಕೊಳ್ಳುವ ಅಧಿಕೃತ ಒಪ್ಪಂದ ನೇಪಾಳ ಪ್ರಧಾನಿ ಕೆ ಪಿ ಓಲಿ ಅವರು ಚೈನಾಗೆ ಭೇಟಿ ನೀಡಿದಾಗ ಜರುಗಲಿದೆ ಎಂದು ಥಾಪಾ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.