ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಷೆಲ್ ಒಬಾಮ ಶುಭಾಶಯ ಕೋರಿದ್ದಾರೆ.
ವಿಶೇಷವೆಂದರೆ ಶುಭಾಶಯ ಪತ್ರದಲ್ಲಿ ಒಬಾಮ ಕುಟುಂಬದ ಪೋರ್ಚುಗೀಸ್ ತಳಿ ನಾಯಿಗಳಾದ `ಬೋ' ಮತ್ತು `ಸನ್ನಿ'ಗಳ ಕೈ ಗುರುತನ್ನು ಮೂಡಿಸಲಾಗಿದೆ.
``ನಿಮಗೆ ಸಂತೋಷ ಮತ್ತು ಆರೋಗ್ಯ ಸಿಗಲಿ ಎಂದು ನಾವು ಸಂತೋಷದಿಂದ ಹಾರೈಸುತ್ತೇವೆ'' ಗ್ರೀಟಿಂಗ್ ಕಾರ್ಡ್‍ನಲ್ಲಿ ಉಲ್ಲೇಖಿಸಲಾಗಿದೆ. ಒಬಾಮ, ಮಿಷೆಲ್ ಒಬಾಮ, ಪುತ್ರಿಯರಾದ ಮಾಲಿಯಾ ಮತ್ತು ಸಶಾ ಸಹಿ ಮಾಡಿದ್ದಾರೆ.
2009 ಮತ್ತು 2013ರಲ್ಲಿ ನಾಯಿಗಳ ಕೈ ಗುರುತು ಗ್ರೀಟಿಂಗ್ ಕಾರ್ಡ್‍ನಲ್ಲಿ ಮೂಡಿಸಲಾಗಿತ್ತು. 2012ರಲ್ಲಿ `ಬೋ' ಎಂಬ ನಾಯಿ ಸ್ಕಾರ್ಫ್ ಟ್ರೆಕಿಂಗ್ ದಿರಿಸು ಧರಿಸಿದ ಫೋಟೋ ಇತ್ತು.