ಕರಾಚಿ: ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ ಇಸೀಸ್(ಐಎಸ್ಐಎಸ್) ಉಗ್ರ ಸಂಘಟನೆಯ ಜಾಲವನ್ನು ಭೇದಿಸಿದೆ.
ಡಾನ್ ಪತ್ರಿಕೆಯ ವರದಿಯ ಪ್ರಕಾರ ಪಾಕ್ ಭಯೋತ್ಪಾದನಾ ನಿಗ್ರಹ ಇಲಾಖೆ 8 ಮಂದಿ ಇಸೀಸ್ ಉಗ್ರ ಸಂಘಟನೆಯ ಶಂಕಿತರನ್ನು ಸಿಯಾಲ್ಕೋಟ್ ನಲ್ಲಿ ಬಂಧಿಸಿದ್ದು, ಬಂಧಿತರಿಂದ ಲ್ಯಾಪ್ ಟಾಪ್, ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಾಗಿದೆ.
ಬಂಧಿತರು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಕಿತ್ತೊಗೆದು, ಸಶಸ್ತ್ರ ಹೋರಾಟದ ಮೂಲಕ ಖಿಲಾಫತ್ ನ್ನು ಸ್ಥಾಪಿಸುವುದಾಗಿ ಪ್ರತಿಜ್ಞೆ ಮಾಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಬಂಧಿತರು ಪಾಕಿಸ್ತಾನದ ಪಂಜಾಬ್ ಮೂಲದವರಾಗಿದ್ದರೂ ಸಹ ಅವರ ಕಾರ್ಯಾಚರಣೆಯ ಕೇಂದ್ರಬಿಂದು ಸಿಯಾಲ್ ಕೋಟ್ ಆಗಿತ್ತು ಎಂದು ತಿಳಿದುಬಂದಿದೆ.