ಮಹಿಳಾ ಬಾಂಬರ್ ನಿಂದ ಆತ್ಮಾಹುತಿ ದಾಳಿ: 5 ಸಾವು (ಸಾಂದರ್ಭಿಕ ಚಿತ್ರ) 
ವಿದೇಶ

ಮಹಿಳಾ ಬಾಂಬರ್ ನಿಂದ ಆತ್ಮಾಹುತಿ ದಾಳಿ: 5 ಸಾವು

ಜಿಗಾವಾ ನಗರದ ರಿದೀಮ್ಡ್ ಕ್ರಿಶ್ಚಿಯನ್ ಚರ್ಚ್ ಬಳಿ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡು 5 ಮಂದಿಯನ್ನು ಬಲಿ ತೆಗೆದುಕೊಳ್ಳುವ ಮೂಲಕ ಉಗ್ರತ್ವಕ್ಕೆ ಭೇದವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ...

ನ್ಯೂಯಾರ್ಕ್: ಜಿಗಾವಾ ನಗರದ ರಿದೀಮ್ಡ್ ಕ್ರಿಶ್ಚಿಯನ್ ಚರ್ಚ್ ಬಳಿ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡು 5 ಮಂದಿಯನ್ನು ಬಲಿ ತೆಗೆದುಕೊಳ್ಳುವ ಮೂಲಕ ಉಗ್ರತ್ವಕ್ಕೆ ಭೇದವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ.

ಸೋಮವಾರ ಬೆಳಿಗ್ಗೆ 10 ರ ಸುಮಾರಿಗೆ ಜಿಗಾವಾ ನಗರದ ರಿದೀಮ್ಡ್ ಕ್ರಿಶ್ಚಿಯನ್ ಚರ್ಚ್ ಒಳ ಬಂದ ಮಹಿಳೆ ಇದ್ದಕ್ಕಿದ್ದಂತೆ ತೊಟ್ಟಿದ್ದ ಬಾಂಬ್ ನ್ನು ಸ್ಫೋಟಿಸಿದ್ದಾಳೆ. ಇದರ ಪರಿಣಾಮ ಚರ್ಚ್ ನಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚರ್ಚೆ ಒಳಗೆ ಬಂದ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ತಾನು ತೊಟ್ಟಿದ್ದ ಬಟ್ಟೆ ಬಿಚ್ಚಿದಳು. ಏನಿದು ಎಂದು ಆಲೋಚಿಸುವುದಕ್ಕೂ ಸಮಯವಿರಲಿಲ್ಲ. ಕ್ಷಣಾರ್ಧದಲ್ಲಿ ಬಾಂಬ್ ಸ್ಫೋಟಗೊಂಡಿತು. ಸ್ಥಳದಲ್ಲಿದ್ದ ಹಲವರು ಗಾಯಗೊಂಡರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ.  

ಘಟನೆ ಕುರಿತಂತೆ ಈ ವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. ಆದರೆ, ದಾಳಿ ಮಾಡಿದ ಮಹಿಳೆ ಇಸಿಸ್ ಅಥವಾ ಬೋಕೋ ಹರಮ್ ಉಗ್ರ ಸಂಘಟನೆಗೆ ಸೇರಿದವಳಾಗಿರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!