ವಿದೇಶ

ವ್ಯಕ್ತಿತ್ವ ಬೆಳವಣಿಗೆಗೆ ಭಾಷೆ ಅತಿಮುಖ್ಯ: ಪ್ರಧಾನಿ ಮೋದಿ

Sumana Upadhyaya

ತಾಷ್ಕೆಂಟ್: ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಗೆ ಭಾಷೆ ಅತ್ಯಂತ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಉಜೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ನಲ್ಲಿ ಭಾರತದ ಇತಿಹಾಸ ತಜ್ಞರು, ಹಿಂದಿ ಭಾಷಾ ವಿದ್ಯಾರ್ಥಿಗಳು ಮತ್ತು ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು. ವಿದೇಶಗಳಲ್ಲಿ ಅಪರಿಚಿತರ ಜೊತೆ ಸಂಪರ್ಕವೇರ್ಪಡಲು ಭಾಷೆ ಸಹಾಯ ಮಾಡುತ್ತದೆ. ಯಾರಾದರೂ ನಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದರೆ ನಮಗೆ ಸಂತೋಷವಾಗುತ್ತದೆ ಎಂದು ಹೇಳಿದರು.

ಉಜೆಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ಮತ್ತು ಪ್ರಧಾನಿ ಶೌಕತ್ ಮಿರೊಮೊನೊವಿಚ್  ಅವರೊಂದಿಗೆ ಮಾತುಕತೆ ನಡೆಸಿದ್ದು, ಔತಣಕೂಟದಲ್ಲಿ ಭಾರತೀಯ ಹಾಡುಗಳನ್ನು ಹಾಡಲಾಯಿತು, ಅದು ನನಗೆ ತುಂಬಾ ಖುಷಿ ನೀಡಿತು ಎಂದು ನುಡಿದರು.

ಭಾಷೆಯು ಯಾವುದನ್ನೂ ತಾರತಮ್ಯ ಮಾಡದೆ ಎಲ್ಲವನ್ನೂ ಸ್ವೀಕರಿಸುತ್ತದೆ ಎಂದರು.
ತಮ್ಮ ಎಂಟು ದಿನಗಳ ಮಧ್ಯ ಏಷ್ಯಾ ಮತ್ತು ರಷ್ಯಾ ಪ್ರವಾಸದಲ್ಲಿರುವ ಮೋದಿ ಮೊದಲಿಗೆ ಉಜೆಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದಾರೆ.

SCROLL FOR NEXT