ಆಸಿಫ್ ಅಲಿ ಜರ್ದಾರಿ - ತನ್ವೀರ್ ಝಮಾನಿ 
ವಿದೇಶ

2ನೇ ಮದುವೆ ವದಂತಿ ತಳ್ಳಿಹಾಕಿದ ಪಾಕ್ ಮಾಜಿ ಅಧ್ಯಕ್ಷ, ಬೆನಜೀರ್ ಪತಿಯಾಗಿ ಉಳಿಯುತ್ತೇನೆ: ಜರ್ದಾರಿ

ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ತಾವು ಅಮೆರಿಕ ಮೂಲದ ವೈದ್ಯೆ ತನ್ವೀರ್ ಝಮಾನಿ ಅವರನ್ನು ಎರಡನೇ ಮದುವೆಯಾಗಿದ್ದಾರೆ...

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ತಾವು ಅಮೆರಿಕ ಮೂಲದ ವೈದ್ಯೆ ತನ್ವೀರ್ ಝಮಾನಿ ಅವರನ್ನು ಎರಡನೇ ಮದುವೆಯಾಗಿದ್ದಾರೆ ಎಂಬ ವದಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಈ ಸಂಬಂಧ ಜರ್ದಾರಿ ಅವರ ವಕ್ತಾರ ಫರಾತುಲ್ಲಾಹ್ ಬಾಬರ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಮಾಜಿ ಅಧ್ಯಕ್ಷರು, ಅವರ ಪತ್ನಿ ದಿ.ಬೆನಜೀರ್ ಭುಟ್ಟೊ ಅವರ ಪತಿಯಾಗಿ ಹಾಗೂ ಶಾಹೀದ್ ಝುಲ್ಫಿಕರ್ ಅಲಿ ಭುಟ್ಟೋ ಅವರ ಅಳಿಯನಾಗಿ ಉಳಿಯಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಜರ್ದಾರಿ ಅವರ ಎರಡನೇ ಮದುವೆಯ ವದಂತಿಗಳಿಗೆ  ತನ್ವೀರ್‌ ಝಮಾನಿ ಅವರೇ ಕಾರಣರೆಂದು ಬಾಬರ್ ದೂರಿದ್ದಾರೆ. ಆಕೆ ಎರಡು ನಾಲಗೆಯಿಂದ ಮಾತನಾಡುತ್ತಾಳೆ; ನಿಖರವಾದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ನೀಡುವುದಿಲ್ಲ ಎಂದವರು ಟೀಕಿಸಿದ್ದಾರೆ.

ಈ ಮಧ್ಯೆ ಡಾ. ಝಮಾನಿ ತಾನು ಜರ್ದಾರಿಯೊಂದಿಗೆ ಮದುವೆಯಾಗಿರುವ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತಿಲ್ಲ ಮತ್ತು ತನ್ನನ್ನು ಮದುವೆಯಾಗಿರುವ ವ್ಯಕ್ತಿಯ ಹೆಸರನ್ನು ಕೂಡ ಬಹಿರಂಗಪಡಿಸುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ಮಾಡಿವೆ.

ಪಾಕ್‌ ಮಾಧ್ಯಮ ವರದಿಗಳ ಪ್ರಕಾರ, ಆಸಿಫ್ ಅಲಿ ಜರ್ದಾರಿ ಅವರು ಎರಡು ವರ್ಷಗಳ ಹಿಂದೆಯೇ ಡಾ| ತನ್ವೀರ್‌ ಝಮಾನಿಯನ್ನು ರಹಸ್ಯವಾಗಿ ಮದುವೆಯಾಗಿದ್ದು, ಇವರಿಗೆ ಹುಟ್ಟಿರುವ ಮಗುವಿಗೆ ಸಜವಾಲ್‌ ಎಂದು ಹೆಸರಿಡಲಾಗಿದೆ.

ಇತ್ತೀಚೆಗಿನ ಟಿವಿ ಸಂದರ್ಶನವೊಂದರಲ್ಲಿ ಸಜವಾಲ್‌ ಬಗ್ಗೆ ಕೇಳಲಾದ ಪ್ರಶ್ನೆಗೆ ತನ್ವೀರ್‌ ಝಮಾನಿ ಅವರು, ನೇರವಾದ ಉತ್ತರ ನೀಡದೆ, 'ಪಾಕಿಸ್ಥಾನದಲ್ಲಿರುವ ಎಲ್ಲ ಮಕ್ಕಳು ತನ್ನ ಪುತ್ರರು' ಎಂದು ಹೇಳಿದ್ದಾರೆ ಎಂದು 'ಡೇಲಿ ಪಾಕಿಸ್ಥಾನ್‌' ವರದಿಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT