ರಷ್ಯಾದಲ್ಲಿ ಭೇಟಿ ಮಾಡಿದ ನರೇಂದ್ರ ಮೋದಿ ಮತ್ತು ವ್ಲಾಡಿಮರ್ ಪುಟಿನ್ 
ವಿದೇಶ

ಪುಟಿನ್ ಮಾಡಲಿದ್ದಾರೆ ಪ್ರ'ಯೋಗ'

ರಷ್ಯಾ ರಾಷ್ಟ್ರಾಧ್ಯಕ್ಷ ಪುಟಿನ್ ಜುಡೋ ನಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರವೀಣ ಆದರೆ ಅವರಿಗೆ ಯೋಗದ ಜೊತೆ ಪ್ರಯೋಗ ಮಾಡಲು ಆಸೆಯಾಗಿದೆಯಂತೆ.

ನವದೆಹಲಿ: ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮರ್ ಪುಟಿನ್ ಜುಡೋ ನಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರವೀಣ ಆದರೆ ಅವರಿಗೆ ಯೋಗದ ಜೊತೆ ಪ್ರಯೋಗ ಮಾಡಲು ಆಸೆಯಾಗಿದೆಯಂತೆ. ಯೋಗ ಮಾಡುವ ಪ್ರಯತ್ನ ಮಾಡುವುದಾಗಿ ಪುಟಿನ್ ನರೇಂದ್ರ ಮೋದಿ ಅವರಿಗೆ ವಚನ ನೀಡಿದ್ದಾರೆ.

"ಯೋಗದ ಆಕರ್ಷಣೆಗೆ ಮನಸೋಲದೆ ಇರಲು ಕಷ್ಟ ಆದರೂ, ನಾನು ಮಾಡದೇ ಇರುವ ಸಂಗತಿಗಳಲ್ಲಿ ಯೋಗ ಕೂಡ ಒಂದು" ಎಂದು ಪುಟಿನ್ ಅವರು ನರೇಂದ್ರ ಮೋದಿಗೆ ರಷ್ಯಾ ನಗರ ಉಫಾದಲ್ಲಿನ ಬುಧವಾರದ ಭೇಟಿಯ ವೇಳೆಯಲ್ಲಿ ತಿಳಿಸಿದ್ದಾರಂತೆ.

ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಕ್ಕೆ ಸಹಾಯ ಮಾಡಿದ ರಷ್ಯಾ ನೆರವನ್ನು ಮೋದಿ ನೆನಪಿಸಿಕೊಂಡಿದ್ದಾರಂತೆ.

ಮೋದಿ ಪುಟಿನ್ ಅವರ ೯೦ ನಿಮಿಷದ ಮಾತುಕತೆಯಲ್ಲಿ ಯೋಗ ಕೂಡ ಒಂದು ವಿಷಯವಾಗಿತ್ತು ಎಂದು ತಿಳಿಸಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ "ನನಗೆ ಯೋಗ ಮಾಡಲು ಬರುವುದಿಲ್ಲ. ನೀವು ಮಾಡುವುದನ್ನು ನೋಡಿದಾಗ ಅದು ಬಹಳ ಕಷ್ಟ ಎಂದೆನಿಸುತ್ತದೆ. ಆದುದರಿಂದ ನಾನಿನ್ನೂ ಪ್ರಯತ್ನಿಸಿಲ್ಲ" ಎಂದು ಪುಟಿನ್ ಅವರು ಮೋದಿ ಅವರಿಗೆ ಹೇಳಿದರು ಎಂದು ಅವರು ತಿಳಿಸಿದ್ದಾರೆ.

ಯೋಗದ ಹೊರತಾಗಿ ನಾಗರಿಕ ಅಣು ಸಹಕಾರ ಮುಂತಾದ ವಿಷಯಗಳನ್ನು ಇಬ್ಬರೂ ನಾಯಕರು ಚರ್ಚಿಸಿದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video