ಅಬುಧಾಬಿ: ಮಗುವನ್ನು ಕಾರಿನಲ್ಲೇ ಬಿಟ್ಟು ಕಾರಿಗೆ ಬೀಗ ಹಾಗಿ ಮರೆತುಹೋದದ್ದರಿಂದ ಅತಿ ಹೆಚ್ಚು ಉಷ್ಣಾಂಶದಲ್ಲಿ ಮಗು ಉಸಿರುಕಟ್ಟಿ ಮೃತಪಟ್ಟ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಶುಕ್ರವಾರ ಸಂಜೆ ತಂದೆಯ ಜೊತೆ ಮಗು ಮನೆಗೆ ಬಂದಿದೆ. ಮಗು ಕಾರಿನಿಂದಾಗಲೆ ಇಳಿದಿದೆ ಎಂದು ತಿಳಿದ ಅಪ್ಪ ಕಾರನ್ನು ಲಾಕ್ ಮಾಡಿದ್ದಾನೆ. ಶಾರ್ಜಾದ ಆಲ್ ರಾಮಸಾ ಪ್ರದೇಶದ ತನ್ನ ಮನೆಯ ಮುಂದೆ ಕಾರು ನಿಂತಿತ್ತು.
ಮಗು ಕಾರಿನಲ್ಲೇ ಮೃತಪಟ್ಟಿತ್ತು ಎಂದು ಪೊಲೀಸರು ನಂತರ ತಿಳಿಸಿದ್ದಾರೆ. ಹತ್ತಿರದ ಆಲ್ ಕ್ವಾಸಿಮಿ ಆಸ್ಪತ್ರೆಗೆ ಕೊಂಡೊಯ್ದರು, ಮಗು ಮೃತಪಟ್ಟಿರುವುದಾಗ ವೈದ್ಯರು ತಿಳಿಸಿದ್ದಾರೆ ಎಂದು ಖಾಲೀಜ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ಕಾರಿನಲ್ಲಿ ಮಕ್ಕಳನ್ನು ಬಿಟ್ಟು ಬಾಗಿಲುಗಳಿಗೆ ಬೀಗ ಹಾಕದಂತೆ ಪೋಷಕರಿಗೆ ಪೊಲೀಸರು ಎಚ್ಚರಿಸಿದ್ದರು. ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಮುಚ್ಚಿದ ಕಾರಿನಲ್ಲಿ ಮಕ್ಕಳನ್ನು ಐದು ನಿಮಿಷ ಬಿಟ್ಟರೂ ಉಸಿರುಗಟ್ಟುವ ಸಾಧ್ಯತೆ ಇರುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಶಾರ್ಜಾದಲ್ಲೇ ಐದಕ್ಕಿಂತಲೂ ಇಂತಹ ಹೆಚ್ಚು ಘಟನೆಗಳು ವರದಿಯಾಗಿದ್ದವು.