ಈಜಿಪ್ಟ್ ನಲ್ಲಿ ಉಗ್ರರ ಅಟ್ಟಹಾಸ: 59 ಸೈನಿಕರ ಬಲಿ (ಸಾಂದರ್ಭಿಕ ಚಿತ್ರ) 
ವಿದೇಶ

ಈಜಿಪ್ಟ್ ನಲ್ಲಿ ಉಗ್ರರ ಅಟ್ಟಹಾಸ: 59 ಸೈನಿಕರ ಬಲಿ

ಈಜಿಪ್ಟ್ ನ ಉತ್ತರ ಸಿನಾಯ್ ದಲ್ಲಿರುವ ಸೇನಾ ಪ್ರಧಾನಕಾರ್ಯಾಲಯಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾನುವಾರ ದಾಳಿ ನಡೆಸಿದ್ದು, ಪರಿಣಾಮ 59 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ...

ಕೈರೊ: ಈಜಿಪ್ಟ್ ನ ಉತ್ತರ ಸಿನಾಯ್ ದಲ್ಲಿರುವ ಸೇನಾ ಪ್ರಧಾನಕಾರ್ಯಾಲಯಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾನುವಾರ ದಾಳಿ ನಡೆಸಿದ್ದು, ಪರಿಣಾಮ 59 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅನ್ಸಾರ್ ಬೆಟ್ ಅಲ್ ಮಕ್ದಿಸ್ ಉಗ್ರ ಸಂಘಟನೆಯ ಪ್ರಾಬಲ್ಯವಿರುವ ಗಬಲ್ ಅಲಿಕಾದ ಶೇಖ್ ಜವಾಯದ್ ಪ್ರದೇಶದಲ್ಲಿ ಸೇನಾ ವಾಹನಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ನಡೆಸಿದ್ದಾರೆ. ಇದರ ಪರಿಣಾಮ ಸ್ಥಳದಲ್ಲಿದ್ದ 59ಕ್ಕೂ ಹೆಚ್ಚು ಉಗ್ರರು ದಾಳಿಯಲ್ಲಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೇನಾ ವಾಹನಗಳನ್ನೇ ಗುರಿಯಾಗಿಸಿಕೊಂಡಿರುವ ಉಗ್ರರು ಉತ್ತರ ಸಿನಾಯ್ ಪ್ರದೇಶದ ಹಲವೆಡೆ ದಾಳಿ ನಡೆಸಿದ್ದು, ದಾಳಿ ವೇಳೆ ಅಹ್ಮದ್ ಗಮಲ್ ಸೇಲಂ ಎಂಬ ಉಗ್ರನನ್ನು ಬಂಧಿಸಲಾಗಿದೆ ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ.

2011ರಲ್ಲಿ ಹೊಸ್ನಿ ಮುಬಾರಕ್ ಅವರು ಪದಚ್ಯುತಗೊಂಡಾಗಿನಿಂದ ಉಗ್ರರ ದಾಳಿಗಳು ಈಜಿಪ್ಟ್ ನಾದ್ಯಂತ ಮುಂದುವರೆಯುತ್ತಲೇ ಬಂದಿದ್ದು, 2013ರಲ್ಲಿ ಮೊಹಮ್ಮದ್‌ ಮೊರ್ಸಿ ಅವರ ಉಚ್ಛಾಟನೆ ಬಳಿಕ ಪೊಲೀಸ್‌ ಹಾಗೂ ಸೇನೆಯನ್ನು ಗುರಿಯಾಗಿಸಿ ನಡೆಸುತ್ತಿರುವ ಉಗ್ರ ದಾಳಿಗಳು ಹೆಚ್ಚಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!