ವಿದೇಶ

ಕಾರ್ಬನ್ ಡೈ ಆಕ್ಸೈಡ್‍ನಿಂದ ಇ-ಡೀಸೆಲ್

Vishwanath S

ಲಂಡನ್: ಇದೀಗ ಮನುಷ್ಯ ಮನಸ್ಸು ಮಾಡಿದರೆ ವಿಷವನ್ನೂ ಅಮೃತ ಮಾಡಬಲ್ಲ ಎಂದು ಸಾಬೀತು ಮಾಡಲು ಹೊರಟಿದ್ದಾನೆ.

ನಮ್ಮ ನಿಶ್ವಾಸದ ಗಾಳಿ, ವಾಹನಗಳಿಂದ, ಫ್ಯಾಕ್ಟರಿಗಳಿಂದ ಉಗುಳಲ್ಪಡುವ ಹೊಗೆ ಇವೆಲ್ಲದರಿಂದ ಪರಿಸರ ಕಲುಷಿತಗೊಳ್ಳುತ್ತಿದೆ,  ಓಜೋನ್ ಪದರಗಳು ತೂತು ಬೀಳುತ್ತಿವೆಯೊಂಬ ಆತಂಕಕ್ಕೆ ಮುಕ್ತಿ ಸಿಗಲಿದೆಯಾ? ಹೌದೆನ್ನುತ್ತಾರೆ ಕೆನಡಾದ ವಿಜ್ಞಾನಿಗಳು.  ಕೆನಡಾದ ವಿಜ್ಞಾನಿಗಳು ವಾತಾವರಣದಲ್ಲಿ  ಹೇರಳವಾಗಿ ಉತ್ಪತ್ತಿಯಾಗುತ್ತಿರುವ ಕಾರ್ಬನ್ ಡೈಆಕ್ಸೈಡ್ ಅನ್ನು ಮರುಬಳಕೆ ಮಾಡುವ ವಿಧಾನವೊಂದನ್ನು ಸಂಶೋಧಿಸಿದ್ದಾರೆ.

ಅದೇ ರೂಪದಲ್ಲಿ ಮರುಬಳಕೆ ಅಲ್ಲ. ಅಪಾಯಕಾರಿ ಕಾರ್ಬನ್ ಡೈ ಆಕ್ಸೈಡ್  ಅನ್ನು ಕಾರ್ಬನ್ ರಹಿತ ಇಂಧನವನ್ನಾಗಿ  ಪರಿವರ್ತಿಸಿ ಇ-ಡೀಸೆಲ್ ಆಗಿ ಕಾರ್ಖಾನೆ ಮತ್ತು ವಾಹನಗಳಿಗೆ ಬಳಸುವ ಹಾಗೆ ಮಾಡುವ ಮಹತ್ವಾಕಾಂಕ್ಷೆಯ ಸಂಶೋಧನೆಗೆ  ವಿಜ್ಞಾನಿಗಳಿಂದ ಚಾಲನೆ ಸಿಕ್ಕಿದೆ. ಇದರ  ಮಹತ್ವ ಮತ್ತು ಅಗತ್ಯವನ್ನರಿತು ಖುದ್ದು ಬಿಲ್ ಗೇಟ್ಸ್ ಒಂದು ಪಾಲು ಆರ್ಥಿಕ  ನೆರವು ನೀಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮರುಬಳಕೆಯ ಸ್ಥಾವರಗಳ ನಿರ್ಮಾಣವಾಗಲಿದ್ದು, ಮರಗಳು ಮಾಡುವ ಸಹಜ ಕ್ರಿಯೆಯನ್ನು ಈ ಸ್ಥಾವರಗಳು ನಿರ್ವಹಿಸುತ್ತವೆ. ಆದರೆ  ಮರುಭೂಮಿ ಮತ್ತು ಹಿಮಪ್ರದೇಶಗಳಲ್ಲಿ ಇವುಗಳ ಸ್ಥಾಪನೆ ಕೊಂಚ ಕಷ್ಟ.  

ಕಾರ್ಯ ಹೇಗೆ?:
ಸೋಲಾರ್ ಸೆಲ್ ಗಳು  ನೀರನ್ನು ಜಲಜನಕ ಇಂಧನವಾಗಿ ಪರಿವರ್ತಿಸುವಂತೆಯೇ, ಕಾರ್ಬನ್ ಡೈಆಕ್ಸೈಡ್  ಮರುಬಳಕೆ ಸ್ಥಾವರ ಕೂಡ, ಸಿಓಟು ಜೊತೆ  ನೀರಿನಲ್ಲಿರುವ ಜಲಜನಕವನ್ನು ಸೇರಿಸಿ  ಕೊಂಡು ಹೈಡ್ರೋ ಕಾರ್ಬನ್  ಇಂಧನವ ನ್ನಾಗಿ ಪರಿವರ್ತಿಸಲಿದೆ. ಮಾಲಿನ್ಯರಹಿತ  ಇಂಧನ ತಯಾರಿಸುವ ನಿಟ್ಟಿನಲ್ಲಿ ಈ ಸಂಶೋಧನೆ ಆರಂಭವಾಗಿದ್ದು, ನವೀಕರಿಸುವ ಶಕ್ತಿ ಗಳ ಸಾಲಿಗೆ ಇದು ಕೂಡ ಸೇರ್ಪಡೆಯಾಗಲಿದೆ. ವಿಶ್ವಾದ್ಯಂತ ಕೆಲವೇ ಕೆಲವು ಕಾರ್ಬನ್ ಎಂಜಿನಿಯರಿಂಗ್ ತಂತ್ರಜ್ಞಾನ  ಕಂಪನಿಗಳಿದ್ದು, ನ್ಯೂಯಾರ್ಕ್‍ನ ಗ್ಲೋಬಲ್ ಥರ್ಮೋಸ್ಟಾಟ್, ಸ್ವಿಸ್ ಮೂಲದ ಕ್ಲೈಮ್ ವರ್ಕ್ ಮುಂತಾಡೆದೆಗಳಲ್ಲಿ ಇಂಗಾಲ ರಹಿತ ಇಂಧನ ತಯಾರಿಸುವ ಸಂಶೋಧನೆ ನಡೆದುಕೊಂಡೇ ಬಂದಿದೆ.

SCROLL FOR NEXT