ಬರಾಕ್ ಒಬಾಮ - ಉಹುರು ಕೆನ್ಯಟ್ಟಾ 
ವಿದೇಶ

ಆಫ್ರಿಕಾ ಪ್ರಗತಿಯ ಪಥದಲ್ಲಿ ಮುನ್ನುಗ್ಗುತ್ತಿದೆ: ಒಬಾಮ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಒಬಾಮ ಅವರು ತಮ್ಮ ತಂದೆಯ ಹುಟ್ಟೂರಿಗೆ ಆಗಮಿಸಿದ್ದಾರೆ...

ನೈರೋಬಿ: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಒಬಾಮ ಅವರು ತಮ್ಮ ತಂದೆಯ ಹುಟ್ಟೂರಿಗೆ ಆಗಮಿಸಿದ್ದಾರೆ. ಶನಿವಾರ ಕೀನ್ಯಾದ ಉದ್ದಿಮೆ ಶೃಂಗದಲ್ಲಿ ಪಾಲ್ಗೊಂಡು ಮಾತನಾಡಿದ ಒಬಾಮ, ``ಆಫ್ರಿರಕಾವು ಪ್ರಗತಿಯ ಪಥದತ್ತ ಸಾಗುತ್ತಿದೆ.

ಹಾಗಾಗಿ ನಾನು ಇಲ್ಲಿರಲು ಬಯಸುತ್ತೇನೆ. ಇಲ್ಲಿನ ಜನ ಬಡತನದಿಂದ ಮೇಲೇಳುತ್ತಿದ್ದಾರೆ, ಆದಾಯ ಮಟ್ಟ ಏರಿಕೆಯಾಗುತ್ತಿದೆ,ನಿಮ್ಮಂತಹ ಯುವಕರು ತಂತ್ರಜ್ಞಾನವನ್ನು ಹೆಚ್ಚೆಚ್ಚು ಬಳಸುತ್ತಿದ್ದೀರಿ. ಇಲ್ಲಿನವರ ಉದ್ಯಮಶೀಲತೆ ನೋಡಿ ಸಂತಸವಾಗುತ್ತಿದೆ'' ಎಂದಿದ್ದಾರೆ.

ಒಬಾಮ ಅವರ ಕೀನ್ಯಾ ಭೇಟಿ ವೇಳೆ ಉಗ್ರರ ದಾಳಿ ಸಾಧ್ಯತೆಯಿದೆ ಎಂದುಅಮೆರಿಕದ ರಾಯಭಾರ ಕಚೇರಿ ಎಚ್ಚರಿಕೆ ನೀಡಿತ್ತು. ಈ ಬಗ್ಗೆ ಪ್ರಸ್ತಾಪಿಸಿದ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಟ್ಟಾ, ಕೀನ್ಯಾವು ಮಾಧ್ಯಮಗಳು ತೋರಿಸಿದ್ದಕ್ಕಿಂತಭಿನ್ನವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿದೆ ಎಂದಿದ್ದಾರೆ.

ಒಬಾಮ ಅವರು ಕೀನ್ಯಾದ ಕುಟುಂಬಕ್ಕೆ ಸೇರಿದವರು. ಒಬಾಮಗೆ 2 ವರ್ಷವಿದ್ದಾಗಲೇ ಅವರ ತಂದೆ ಮನೆ ಬಿಟ್ಟು ತೆರಳಿದ್ದರು. 1982ರಲ್ಲಿ ನೈರೋಬಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿಒಬಾಮ ಅವರಿಗೆ ತಮ್ಮ ತಂದೆಯನ್ನು ನೋಡಿದ ನೆನಪೇ ಇಲ್ಲವಂತೆ. ದಶಕದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಒಬಾಮ ನಂತರ ಇದೇ ಮೊದಲ ಬಾರಿಗೆ  ಕೀನ್ಯಾಗೆ ಆಗಮಿಸಿದ್ದಾರೆ.

ಇದೇ ವೇಳೆ, ಒಬಾಮ ಆಗಮನದ ಹಿನ್ನೆಲೆಯಲ್ಲಿ ಕೀನ್ಯಾದ ಮಹಿಳೆಯರು ತಮ್ಮ ಶಿಶುಗಳಿಗೆ ಏರ್ ಫೋರ್ಸ್ ಒನ್ ಒಬಾಮ ಎಂದು ನಾಮಕರಣ ಮಾಡುತ್ತಿದ್ದಾರೆ. ಈ ಹೆಸರಿಟ್ಟರೆ ಮಕ್ಕಳು ಒಬಾಮರಂತೆ ಉನ್ನತ ಹುದ್ದೆಗೇರುತ್ತಾರೆ ಎಂಬ ಭಾವನೆ ಈ ಅಮ್ಮಂದಿರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ