ಉಗ್ರ ಸಂಘಟನೆಯಿಂದ ಪಲಾಯನ ಮಾಡಿದ ಉಗ್ರ(ಸಂಗ್ರಹ ಚಿತ್ರ) 
ವಿದೇಶ

ರುಂಡ ಕತ್ತರಿಸುತ್ತಿದ್ದ ಜಿಹಾದಿ ಜಾನ್ ಕೊನೆಗೆ ಪ್ರಾಣಭೀತಿಯಿಂದ ಇಸೀಸ್ ನ್ನೇ ತೊರೆದ!

ಜೀವ ಭಯ ಯಾರನ್ನು ಕಾಡಿಲ್ಲ ಹೇಳಿ? ಆಧುನಿಕ ಯುಗದ ರಾಕ್ಷಸರಂತೆ ರುಂಡ ಕತ್ತರಿಸುವ ಜಿಹಾದಿಗಳಿಗೆ ಜೀವಭಯ ಇರುವುದಿಲ್ಲವೇ?

ಜೀವ ಭಯ ಯಾರನ್ನು ಕಾಡಿಲ್ಲ ಹೇಳಿ? ಪುರಾಣಗಳಲ್ಲಿ ದಾನವರಿಗೂ ಜೀವಭಯ ಉಂಟಾದ ಉದಾಹರಣೆಗಳಿವೆ ಇನ್ನು ಆಧುನಿಕ ಯುಗದ ರಾಕ್ಷಸರಂತೆ ರುಂಡ ಕತ್ತರಿಸುವ ಜಿಹಾದಿಗಳಿಗೆ ಜೀವಭಯ ಇರುವುದಿಲ್ಲವೇ?

ಅನ್ಯರ ರುಂಡ ಕತ್ತರಿಸುವಾಗ ಇಲ್ಲದ ಜೀವಭಯ ಇಲ್ಲೊಬ್ಬ ಜಿಹಾದಿಗೆ ತಡವಾಗಿಯಾದರೂ ಬಂದಿದೆ. ಜಾನ್ ಅಕಾ ಮೊಹಮದ್ ಇಂವಾಜ್ಹಿ ಇಸ್ಲಾಮಿಕ್ ಸ್ಟೇಟ್ ನ ಉಗ್ರ ಸಾಮ್ರಾಜ್ಯದಿಂದ ಪಲಾಯನ ಮಾಡಿದ್ದಾನೆ. ಆದರೇನು ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಗಾದೆಯಂತೆ  ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಓಡಿ ಹೋದ ಆತ ಭಯೋತ್ಪಾದನೆಯನ್ನು ಬಿಡದೇ ಸಿರಿಯಾದಲ್ಲೇ ಇರುವ ಮತ್ತೊಂದು ಸಣ್ಣ ಉಗ್ರ ಸಂಘಟನೆಗೆ ಸೇರಿದ್ದಾನೆ!.  

ಯು.ಎಸ್ ನ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಜಾನ್ ಅಕಾ ಮೊಹಮದ್ ಇಂವಾಜ್ಹಿಯಿಂದ ಮುಂದೆ ಯಾವುದೇ ಉಪಯೋಗವಿರಲಿಲ್ಲವಾದ್ದರಿಂದ ಆತನನ್ನು ಐಎಸ್ಐಎಸ್ ಉಗ್ರ ಸಂಘಟನೆಯೇ ಹೊರಹಾಕಲು ನಿರ್ಧರಿಸಿತ್ತು ಎನ್ನಲಾಗಿದೆ. ಜೀವಭಯದಿಂದ ಹೆದರಿರುವ ಇಸೀಸ್ ನ ಮಾಜಿ ಉಗ್ರ, ಬ್ರಿಟನ್ ನ ಪ್ರಜೆಗಳು ಸೇರಿದಂತೆ ಹಲವರ ಶಿರಚ್ಛೇಧನದ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ. ಅಷ್ಟೆ ಅಲ್ಲದೇ ಸ್ವತಃ ತಾನೇ ಅಮೆರಿಕಾದ ಪತ್ರಕರ್ತರ ರುಂಡ ಕತ್ತರಿಸಿದ್ದ.
ಜಾನ್ ಮೊಹಮದ್ ನನ್ನು ತನ್ನ ಸಹವರ್ತಿ ಜಿಹಾದಿಗಳೇ ಕೊಲ್ಲಲು ಯತ್ನಿಸಿದ್ದರಿಂದ ಆತ ಪ್ರಾಣಭೀತಿ ಎದುರಿಸುತ್ತಿದ್ದ. ಅಷ್ಟೇ ಅಲ್ಲದೇ ರುಂಡ ಕತ್ತರಿಸುತ್ತಿದ್ದ ಈ ಜಿಹಾದಿ ಶವ ಅಥವಾ ಜೀವಂತವಾಗಿಯಾದರೂ ಬ್ರಿಟನ್, ಅಮೇರಿಕಾ, ಜಪಾನ್ ಹಾಗೂ ಈಜಿಪ್ಟ್ ರಾಷ್ಟ್ರಗಳಿಗೆ ಬೇಕಾಗಿದ್ದ. ಇನ್ನು ಮುಂದೆ ಜಾನ್ ನಿಂದ ಯಾವುದೇ ಉಪಯೋಗವಿಲ್ಲದ್ದನ್ನು ಮನಗಂಡ ಇಸೀಸ್ ಉಗ್ರ ಸಂಘಟನೆ ಜಾನ್ ಮೊಹಮದ್ ಜೀವವನ್ನೇ ತೆಗೆಯಲು ಚಿಂತನೆ ನಡೆಸಿತ್ತು. ಪ್ರಾಣಭೀತಿಯಿಂದ ಇಸೀಸ್ ತೊರೆದಿರುವ ಜಾನ್ ಅಕಾ ಮೊಹಮದ್ ಇಂವಾಜ್ಹಿ ಪ್ರಸ್ತುತ ಲಿಬಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT