ವಾಷಿಂಗ್ಟನ್: 1984ರ ಸಿಖ್ ವಿರುದ್ಧದ ಗಲಭೆ ಮತ್ತು ಹಿಂಸಾಚಾರ ಸಂಬಂಧದಲ್ಲಿ ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದು, ತಾವು ನೀಡಿರುವ ಸಮನ್ಸ್ ಗೆ ಇನ್ನಾದರೂ ಪ್ರತಿಕ್ರಿಯಿಸಿಲ್ಲ ಎಂದು ನ್ಯೂಯಾರ್ಕ್ ಮೂಲದ ವಕೀಲ ಸಮೂಹ ಹೇಳಿದೆ.
ಅವರ ಗೈರುಹಾಜರಿಯನ್ನು ಅಪರಾಧವೆಂದು ಪರಿಗಣಿಸಿ ತೀರ್ಪು ನೀಡಬೇಕೆಂದು ಆಗ್ರಹಿಸಿದೆ. ಫೆಡರಲ್ ನಿಯಮಗಳ ಪ್ರಕಾರ ಅಮಿತಾಭ್ ನಿಗದಿತ ಸಮಯದೊಳಗೆ ಸಮನ್ಸ್ ಗೆ ಪ್ರತಿಕ್ರಿಯೆ ನೀಡಿಲ್ಲ.
ಆದ್ದರಿಂದ ಅವರ ತಪ್ಪಿಗೆ ಸೂಕ್ತ ತೀರ್ಪು ನೀಡಬೇಕೆಂದು ಹಾಲಿವುಡ್ ಫೆಡರಲ್ ಕೋರ್ಟ್‍ಅನ್ನು ವಕೀಲರು ಕೇಳಿಕೊಂಡಿದ್ದಾರೆ. ಫೆಡರಲ್ ನಿಯಮಗಳ ಪ್ರಕಾರ ಅಮಿತಾಭ್ ನಿಗದಿತ ಸಮಯದೊಳಗೆ ಸಮನ್ಸ್ ಗೆ ಪ್ರತಿಕ್ರಿಯೆ ನೀಡಿಲ್ಲ.