ರಷ್ಯಾ ವಿಮಾನ ಪತನ 
ವಿದೇಶ

ರಷ್ಯಾ ವಿಮಾನ ಪತನಕ್ಕೆ ಐಎಸ್ ಬಾಂಬ್ ಕಾರಣ: ಭದ್ರತಾಧಿಕಾರಿಗಳು ಮಾಹಿತಿ

ಕಳೆದ ವಾರ ಈಜಿಪ್ಟ್ ನಲ್ಲಿ ಸಂಭವಿಸಿದ್ದ ರಷ್ಯಾ ವಿಮಾನ ದುರಂತಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರು ವಿಮಾನದಲ್ಲಿರಿಸಿದ್ದ ಬಾಂಬ್ ಕಾರಣ ಎಂದು ಅಮೆರಿಕ ಮತ್ತು ಯುರೋಪ್ ಭದ್ರತಾಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ...

ನ್ಯೂಯಾರ್ಕ್: ಕಳೆದ ವಾರ ಈಜಿಪ್ಟ್ ನಲ್ಲಿ ಸಂಭವಿಸಿದ್ದ ರಷ್ಯಾ ವಿಮಾನ ದುರಂತಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರು ವಿಮಾನದಲ್ಲಿರಿಸಿದ್ದ ಬಾಂಬ್ ಕಾರಣ ಎಂದು ಅಮೆರಿಕ ಮತ್ತು ಯುರೋಪ್ ಭದ್ರತಾಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.

ಇರಾಕ್ ಮತ್ತು ಸಿರಿಯಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಐಎಸ್ ಸಂಘಟನೆಯ ಉಗ್ರರು ಈಜಿಪ್ಟ್ ಮೇಲೆ ತಮ್ಮ ಹಿಡಿತ ಸಾಧಿಸಲು ಯತ್ನ ನಡೆಸುತ್ತಿದ್ದು, ವಿಮಾನ ಪತನಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ವಿಮಾನದಲ್ಲಿ ಸ್ಪೋಟಕ ಸಾಮಾಗ್ರಿಗಳ ಅಂಶಗಳಿರುವುದಾಗಿ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿತ್ತು. ಇದರಂತೆ ಅಮೆರಿಕ ತನಿಖಾ ತಂಡವು ವಿಮಾನದ ಇಂಧನ ಟ್ಯಾಂಕಿನಲ್ಲಿ ಉಂಟಾದ ಸ್ಪೋಟ ಅಥವಾ ಬಾಂಬ್ ಸ್ಪೋಟದಿಂದಾಗಿ ದುರಂತ ಸಂಭವಿಸಿರಬಹುದು ಎಂದು ಹೇಳಿತ್ತು.

ಇದೀಗ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಬಾಂಬ್ ನ್ನು ವಿಮಾನದಲ್ಲಿರಿಸಿರುವುದಾಗಿ ಹೇಳಲಾಗುತ್ತಿದ್ದು, ವಿಮಾನ ಪತನವಾದ ಸ್ಥಳದಲ್ಲಿ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಉಗ್ರರು ಬಾಂಬ್ ನ್ನು ವಿಮಾನದಲ್ಲಿ ಎಲ್ಲಿ ಇರಿಸಿದ್ದರು ಎಂಬುದು ಈ ವರೆಗೂ ಖಚಿತವಾಗಿಲ್ಲ.

ರಷ್ಯಾ ಏರ್ ಲೈನ್ಸ್ ಎ321 ವಿಮಾನವು ಸಿಬ್ಬಂದಿ ಸೇರಿ 224 ಪ್ರಯಾಣಿಕರನ್ನು ಈಜಿಪ್ಟ್ ನಿಂದ ರಷ್ಯಾಗೆ ತೆರಳಲು ಸಿದ್ಧವಾಗಿತ್ತು. ಈಜಿಪ್ಟ್ ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಕಂಟ್ರೋಲ್ ನ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ವಿಮಾನವು ಈಜಿಪ್ಟ್ ನ ಸಿಯಾನ್ ಬಳಿ ಅಪಘಾತಕ್ಕೀಡಾಗಿತ್ತು. ದುರಂತದಲ್ಲಿ 224 ಜನರು ಮೃತಪಟ್ಟಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel