ಹರ್ಜಿತ್ ಸಜ್ಜಾನ್ 
ವಿದೇಶ

ಭಾರತೀಯ ಮೂಲದ ವ್ಯಕ್ತಿ ಕೆನಡಾದ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕಾರ

ಭಾರತೀಯ ಮೂಲದ ಹರ್ಜಿತ್ ಸಜ್ಜಾನ್ ಅವರನ್ನು ಕೆನಡಾದ ನೂತನ ರಕ್ಷಣಾ ಸಚಿವರಾಗಿ ನೇಮಕವಾಗಿದ್ದಾರೆ. ಕೆನಡಾ ಪ್ರಧಾನಿ ಜುಸ್ಟಿನ್ ಅವರ 30 ಮಂದಿಯ...

ಒಟ್ಟಾವಾ: ಭಾರತೀಯ ಮೂಲದ ಹರ್ಜಿತ್ ಸಜ್ಜಾನ್ ಅವರನ್ನು ಕೆನಡಾದ ನೂತನ ರಕ್ಷಣಾ ಸಚಿವರಾಗಿ ನೇಮಕವಾಗಿದ್ದಾರೆ. ಕೆನಡಾ ಪ್ರಧಾನಿ ಜುಸ್ಟಿನ್ ಅವರ 30 ಮಂದಿಯ ಸಂಪುಟಕ್ಕೆ ಸಜ್ಜಾನ್  ಸೇರ್ಪಡೆಗೊಂಡಿದ್ದಾರೆ.

ಒಟ್ಟಾವಾದಲ್ಲಿ  ಪ್ರಧಾನಿ ಜುಸ್ಟಿನ್ ಅವರ 30 ಮಂದಿ ಸಂಪುಟ ಸದಸ್ಯರ ಜೊತೆ ಹರ್ಜಿತ್ ಸಜ್ಜಾನ್ ಕೂಡ ಪ್ರಮಾಣವಚನ ಸ್ವೀಕರಿಸಿದರು.

ಕೆನಡಾ ಆರ್ಮಿ ಫೋರ್ಸ್ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದ ಹರ್ಜಿತ್ ಸಜ್ಜಾನ್ ಅವರು ಕೆನಡಾ ದಕ್ಷಿಣ ವ್ಯಾನ್ ಕೋವರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಭರ್ಜರಿ ಸಮಾರಂಭದಲ್ಲಿ ಜುಸ್ಟಿನ್ ಕೆನಡಾದ 23ನೇ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಹರ್ಜಿತ್ ಸಜ್ಜಾನ್ ಬೋಸ್ನಿಯಾ ಮತ್ತು ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಮಿಲಿಟರಿ ಸೇವೆ ಸಲ್ಲಿಸಿದ್ದರು. ಹರ್ಜಿತ್ ಸೇವೆಗಾಗಿ 2013ರಲ್ಲಿ ಪದಕವನ್ನು ಪಡೆದಿದ್ದರು.

ಹರ್ಜಿತ್ ಸಜ್ಜಾನ್ ಭಾರತದಲ್ಲೇ ಜನಿಸಿದ್ದರು. ಅವರು 5 ವರ್ಷದವರಾಗಿದ್ದಾಗ ತಮ್ಮ ಪೋಷಕರೊಡನೆ ಕೆನಡಾಗೆ ತೆರಳಿ ಅಲ್ಲಿಯೇ ನೆಲೆಸಿದ್ದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT