ಸಂಗ್ರಹ ಚಿತ್ರ 
ವಿದೇಶ

ಉಗ್ರ ಸಂಘಟನೆಗೆ ನೆರವು ಆರೋಪ: ಇಬ್ಬರು ಭಾರತೀಯರು ದೋಷಿಗಳು

ಅಲ್ ಕೈದಾ ಉಗ್ರ ಸಂಘಟನೆಗೆ ನೆರವಾದ ಆರೋಪ ಎದುರಿಸುತ್ತಿದ್ದ ಇಬ್ಬರು ಭಾರತೀಯ ಸಹೋದರರನ್ನು ದೋಷಿಗಳೆಂದು...

ನ್ಯೂಯಾರ್ಕ್: ಅಲ್ ಕೈದಾ ಉಗ್ರ ಸಂಘಟನೆಗೆ ನೆರವಾದ ಆರೋಪ ಎದುರಿಸುತ್ತಿದ್ದ ಇಬ್ಬರು ಭಾರತೀಯ ಸಹೋದರರನ್ನು ದೋಷಿಗಳೆಂದು ಯುಎಸ್ ಫೆಡರಲ್ ಕೋರ್ಟ್ ತೀರ್ಪು ನೀಡಿದೆ. 
2005-2010ರ ಕಾಲಾವಧಿಯಲ್ಲಿ ಅಲ್ ಕೈದಾ ಮುಖಂಡ ಅನ್ವರ್ ಅಲ್ ಅವ್ ಲಾಕ್ ಎಂಬಾತನಿಗೆ ಹಣ, ಉಪಕರಣಗಳನ್ನೊಳಗೊಂಡ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ಸಹೋದರರಾದ ಯಹ್ಯಾ ಫಾರೂಕ್ ಮುಹಮ್ಮದ್, ಇಬ್ರಾಹೀಂ ಝುಬೈರ್ ಮುಹಮ್ಮದ್ ಮತ್ತು ಇನ್ನೂ ಇಬ್ಬರು ಆರೋಪಿಗಳಾದ ಆಸಿಫ್ ಅಹ್ಮದ್ ಸಲೀಂ, ಸುಲ್ತಾನ್ ರೂಂ ಸಲೀಂ ದೋಷಿಗಳೆಂದು ನ್ಯಾಯಾಲಯ ಹೇಳಿದೆ. 
2009ರಲ್ಲಿ ಫಾರೂಕ್ ಇನ್ನಿಬ್ಬರ ಜೊತೆ ಸೇರಿ ಯಮನಿನಲ್ಲಿ ಅಲ್ ಕೈದಾದ ಅನ್ವರ್ ಅಲ್ ಅವ್ ಲಾಕಿನೊಂದಿಗೆ ನೇರ ಸಂದರ್ಶನ ನಡೆಸಿದ್ದಾರೆ.
2002ರಿಂದ 2004ರವರೆಗೆ ಒಹಿಯೊ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಫಾರೂಕ್, 2008ರಲ್ಲಿ ಅಮೆರಿಕದ ಯುವತಿಯೊಬ್ಬಳನ್ನು ವಿವಾಹವಾಗಿದ್ದರು. ಫಾರೂಕ್ ಸಹೋದರರಾದ ಇಬ್ರಾಹೀಂ 2001ರಿಂದ 2005ವರೆಗೆ ಇಲ್ಲಿನೋಯಿಸ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!