ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಫ್ರಾನ್ಸ್ ದಾಳಿ ಪ್ರಕರಣ: 3 ಉಗ್ರರ ಬಂಧನ

ಮೊನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ ಸಂಬಂಧಪಟ್ಟಂತೆ ಬೆಲ್ಜಿಯಂ ಪೊಲೀಸರು...

ಪ್ಯಾರಿಸ್ ನಲ್ಲಿ ಉಗ್ರರು ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸುತ್ತಿರುವ ಪೊಲೀಸರು
Mainashree
Updated On : 15 Nov 2015, 11:20 am
ಪ್ಯಾರೀಸ್: ಮೊನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ ಸಂಬಂಧಪಟ್ಟಂತೆ ಬೆಲ್ಜಿಯಂ ಪೊಲೀಸರು ಮೂವರು ಭಯೋತ್ಪಾದಕರನ್ನೂ ಬಂಧಿಸಿದ್ದಾರೆ.
ಮೊನ್ನೆಯಷ್ಟೆ ಭಯೋತ್ಪಾದಕರು ಪ್ಯಾರೀಸ್ ನ ಹಲವಾರು ಕಡೆ ದಾಳಿ ನಡೆಸಿದ್ದರು. ಬೆಟಕ್ಲಾನ್ ಆಡಿಟೋರಿಯಂ ಬಳಿ ದಾಳಿ ನಡೆದ ವೇಳೆ ನಂಬರ್ ಪ್ಲೆಟ್ ಇರುವ ಕಾರು ಪತ್ತೆಯಾಗಿತ್ತು. ಈ ಮಾಹಿತಿ ಆಧಾರದ ಮೇರೆಗೆ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದರು. 
ಬೆಟಕ್ಲಾನ್ ಕ್ರಾಸ್ ಬಳಿ ಸಿಸಿಟಿವಿಯಲ್ಲಿ ಕಾರಿನ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಬೆಲ್ಜಿಯಂ ಪೊಲೀಸರು, ಮೂವರು ಉಗ್ರರನ್ನು ಬಂಧಿಸಿದ್ದಾರೆ. 

Advertisement

Advertisement

ಬಂಧಿತ ಆರೋಪಿಗಳು ದಾಳಿ ನಡೆಸಿದ ಉಗ್ರನೊಬ್ಬನ ಸಂಬಂಧಿಕರಾಗಿದ್ದು, ಉಗ್ರನ ತಂದೆ, ಸಹೋದರರು ಎಂದು ತಿಳಿದು ಬಂದಿದೆ.
ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಉಗ್ರರ ದಾಳಿ ಘಟನೆಯಲ್ಲಿ 127 ಅಮಾಕರು ಮೃತ್ತಪಟ್ಟಿದ್ದು, 300 ಹೆಚ್ಚು ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement