ಅಂತಾಲ್ಯಾ: ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಪರಸ್ಪರ ಭೇಟಿಯಾಗಿರುವ ಭಾರತ ಹಾಗೂ ಆಸ್ಟ್ರೇಲಿಯಗಳ ಪ್ರಧಾನಮಂತ್ರಿಗಳು ನಾಗರಿಕ ಪರಮಾಣು ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿವೆ.
ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯ ಪ್ರಧಾನಿ ಮಾಲ್ಕಮ್ ಟರ್ನ್‍ಬುಲ್ ಭೇಟಿಯಾಗಿ ನಾಗರಿಕ ಪರಮಾಣು ಒಪ್ಪಂದದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಈ ನಡೆಗೆ ಮೋದಿ ಅವರು ಟರ್ನ್‍ಬುಲ್‍ಗೆ ಧನ್ಯವಾದ ಸಲ್ಲಿಸಿದ್ದಾರೆ. ದ್ವಿಪಕ್ಷೀಯ ಸಂಬಂಧದಲ್ಲಿ ಇದೊಂದು ಮೈಲುಗಲ್ಲು, ನಮ್ಮ ನಡುವಿರುವ ನಂಬಿಕೆಯ ದ್ಯೋತಕ ಎಂದಿದ್ದಾರೆ.
ಭಾರತದ ಇಂಧನ ಅಗತ್ಯಕ್ಕೆ ತಕ್ಕ ಯುರೇನಿಯಂ ಅನ್ನು ಒದಗಿಸಲು ಆಸ್ಟ್ರೇಲಿಯ ಕಳೆದ ಸೆಪ್ಟೆಂಬರ್‍ನಲ್ಲಿ ಒಪ್ಪಿಕೊಂಡಿತ್ತು.