ಆತ್ಮಾಹುತಿ ಬಾಂಬರ್ ಬಾಂಬ್ ಸ್ಫೋಟಿಸಲು ಮಾನಸಿಕ ಒತ್ತಡ ಕಾರಣ?
ನನ್ನ ಮಗ ಯಾರನ್ನೂ ಹತ್ಯೆಗೈಯ್ಯಬೇಕೆಂಬ ಉದ್ದೇಶದಿಂದ ಬಾಂಬ್ ಸ್ಫೋಟಿಸಿಲ್ಲ. ಆತ ಈ ಕೃತ್ಯವೆಸಗಿದ್ದು ಮಾನಸಿಕ...
ಪ್ಯಾರೀಸ್: ನನ್ನ ಮಗ ಯಾರನ್ನೂ ಹತ್ಯೆಗೈಯ್ಯಬೇಕೆಂಬ ಉದ್ದೇಶದಿಂದ ಬಾಂಬ್ ಸ್ಫೋಟಿಸಿಲ್ಲ. ಆತ ಈ ಕೃತ್ಯವೆಸಗಿದ್ದು ಮಾನಸಿಕ ಒತ್ತಡದಿಂದ ಎಂದು ಪ್ಯಾರೀಸ್ ಆತ್ಮಾಹುತಿ ಬಾಂಬರ್ನ ತಾಯಿ ಹೇಳಿದ್ದಾರೆ.
31ರ ಹರೆಯದ ಇಬ್ರಾಹಿಂ ಅದ್ದೇಸ್ಲಾಮ್ ಎಂಬಾತ ಶುಕ್ರವಾರ ಪ್ಯಾರೀಸ್ನ ಕಫೆ ಕಾಂಪ್ಟೈರ್ ವೊಲ್ಟೈರ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ. ಪ್ಯಾರೀಸ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 129 ಮಂದಿ ಸಾವಿಗೀಡಾಗಿದ್ದರು.
ದಾಳಿ ನಡೆದ ಮರುದಿನವೇ ಇಬ್ರಾಹಿಂನ ಸಹೋದರ ಮೊಹಮ್ಮದ್ ಅದ್ದೇಸ್ಲಾಮ್ ನ್ನು ಬ್ರೂಸೆಲ್ಸ್ ನ ಮೊಲೇನ್ಬೀಕ್ನಲ್ಲಿ ಬಂಧಿಸಲಾಗಿತ್ತು. ಅದೇ ವೇಳೆ ಈತನ ಇನ್ನೊಬ್ಬ ಸಹೋದರ ಸಲ್ಲಾಹ್ ತಲೆ ಮರೆಸಿಕೊಂಡಿದ್ದಾನೆ.
ಜನರನ್ನು ಹತ್ಯೆಗೈಯ್ಯಬೇಕೆಂಬುದು ಖಂಡಿತವಾಗಿಯೂ ಆತನ ಉದ್ದೇಶವಾಗಿರಲಿಲ್ಲ. ಮಾನಸಿಕ ಒತ್ತಡವೇ ಇದಕ್ಕೆಲ್ಲ ಕಾರಣ ಎಂದು ಇಬ್ರಾಹಿಂ ಅದ್ದೇಸ್ಲಾಮ್ ನ ತಾಯಿ ಹೇಳಿದ್ದನ್ನು ಮಾಧ್ಯಮವೊಂದು ವರದಿ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.