ಲಂಡನ್: ಕಳೆದ ವಾರ ಸಿರಿಯಾದಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತನಾದ ಐಎಸ್ ಉಗ್ರ ಜಿಹಾದ್ ಜಾನ್ ಎಂಬ ಹೆಸರಿಂದಲೇ ಗುರುತಿಸಿ ಕೊಂಡಿದ್ದ ಮೊಹಮ್ಮದ್ ಎಮ್ವಾಜಿಗೆ ಸಾವಿನ ನಂತರ ಪುತ್ರಭಾಗ್ಯ ಲಭಿಸಿದೆಯೆಂದು ವರದಿಯಾಗಿದೆ.
ನವಜಾತ ಶಿಶು ಬ್ರಿಟಿಷ್ ಪ್ರಜೆಯೆಂದೇ ಪರಿಗಣನೆಯಾಗುತ್ತಿರುವುದು ವಿಶೇಷ. ಕುವೈತ್ ನಲ್ಲಿ ಹುಟ್ಟಿ ಬ್ರಿಟಿಷ್ ಪ್ರಜೆಯಾಗಿದ್ದ ಜಿಹಾದಿ ಜಾನ್‍ಗೆ ಗಂಡುಮಗು ಹುಟ್ಟಿರುವ ಸುದ್ದಿ ರಹಸ್ಯ ವಾಗಿಟ್ಟಿದ್ದರೂ ಗುಪ್ತಮೂಲಗಳಿಂದಲೇ ಬಯಲಾಗಿದ್ದು ಈ ಮಗುವನ್ನು ಬ್ರಿಟನ್‍ಗೆ ಕರೆತರಲಾಗುವುದು ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಮಗುವಿನ ತಾಯಿಯ ಮೂಲದೇಶ, ನಾಗರಿಕತ್ವ ಎಲ್ಲಿಯದು ಎಂಬುದು ಗೊತ್ತಾಗಿಲ್ಲ. ತಾಯಿಯ ವೈಯಕ್ತಿಕ ಪರಿಚಯ ಸಿಕ್ಕಿಲ್ಲ ಎನ್ನಲಾಗಿದೆ.