ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ 
ವಿದೇಶ

ಇಸಿಸ್ ನಿಗ್ರಹಕ್ಕೆ ಪಣತೊಟ್ಟ ಫ್ರಾನ್ಸ್

ಪ್ಯಾರಿಸ್ ದಾಳಿಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಗ್ರಹಕ್ಕೆ ಫ್ರಾನ್ಸ್ ದೇಶ ಪಣತೊಟ್ಟಿದೆ. ಉಗ್ರ ಕೃತ್ಯಗಳನ್ನೆಸಗುತ್ತಿರುವ ಇಸಿಸ್ ಉಗ್ರರನ್ನು...

ಪ್ಯಾರಿಸ್:  ಪ್ಯಾರಿಸ್ ದಾಳಿಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಗ್ರಹಕ್ಕೆ ಫ್ರಾನ್ಸ್ ದೇಶ ಪಣತೊಟ್ಟಿದೆ. ಉಗ್ರ ಕೃತ್ಯಗಳನ್ನೆಸಗುತ್ತಿರುವ ಇಸಿಸ್ ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ತಮಗೆ ಸಹಾಯ ನೀಡುವಂತೆ ಅಮೆರಿಕ ಮತ್ತು ರಷ್ಯಾ ದೇಶಗಳಿಗೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಕರೆ ನೀಡಿದ್ದಾರೆ.
ಪ್ಯಾಲೇಸ್ ಆಫ್ ವರ್‌ಸೈಲೆಸ್‌ನಲ್ಲಿ ನಡೆದ ಪಾರ್ಲಿಮೆಂಟ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಹೊಲ್ಲಾಂಡ್ , ಫ್ರಾನ್ಸ್ ಯುದ್ಧ ತಂತ್ರ ಹೂಡಿದೆ ಎಂದಿದ್ದಾರೆ. ಅದೇ ವೇಳೆ ದೇಶದ ಭದ್ರತೆ ಮತ್ತು ಉಗ್ರ ನಿಗ್ರಹ ಕಾನೂನನ್ನು ಸದೃಢಗೊಳಿಸಲು ಹೆಚ್ಚಿನ ನಿಧಿಯನ್ನು ವಿನಿಯೋಗಿಸಲಾಗುವುದು ಎಂದು ಹೇಳಿದ್ದಾರೆ.
ನಾವು ನಾಗರಿಕತೆಯ ಮೇಲೆ ಯುದ್ಧ ಹೂಡುವುದಿಲ್ಲ,ಯಾಕೆಂದರೆ ಈ ಹಂತಕರು ಯಾರನ್ನೂ ಪ್ರತಿನಿಧೀಕರಿಸುವುದಿಲ್ಲ. ಜಗತ್ತಿಗೇ ಭೀತಿಯೊಡ್ಡಿರುವ ಜಿಹಾದಿ ಉಗ್ರರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೊಲ್ಲಾಂಡ್ ಹೇಳಿಕೆ ನೀಡಿದ್ದಾರೆ.
ಉಗ್ರ ನಿಗ್ರಹ ಹೋರಾಟದಲ್ಲಿ ಕೈ ಜೋಡಿಸುವಂತೆ ಅಮೆರಿಕ ಮತ್ತು ರಷ್ಯಾ ದೇಶಕ್ಕೆ ಕರೆ ನೀಡಿದ ಹೊಲ್ಲಾಂಜ್, ಶೀಘ್ರದಲ್ಲೇ ತಾವು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ