ವ್ಲಾಡಿಮಿರ್ ಪುಟಿನ್ 
ವಿದೇಶ

ಭಯೋತ್ಪಾದಕರ ಕೃತ್ಯದಿಂದ ರಷ್ಯಾ ವಿಮಾನ ಪತನ

ಅಕ್ಟೋಬರ್ 31ರಂದು ಈಜಿಪ್ಟ್​ನ ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾ ಪ್ರಯಾಣಿಕರ ವಿಮಾನ ಪತನಗೊಳ್ಳಲು ವಿಮಾನದಲ್ಲಿ ಇರಿಸಲಾಗಿದ್ದ ಬಾಂಬ್ ಕಾರಣ ಎಂದು ರಷ್ಯಾದ...

ಮಾಸ್ಕೋ: ಅಕ್ಟೋಬರ್ 31ರಂದು ಈಜಿಪ್ಟ್​ನ ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾ ಪ್ರಯಾಣಿಕರ ವಿಮಾನ ಪತನಗೊಳ್ಳಲು ವಿಮಾನದಲ್ಲಿ ಇರಿಸಲಾಗಿದ್ದ ಬಾಂಬ್ ಕಾರಣ ಎಂದು ರಷ್ಯಾದ ಎಫ್​ಎಸ್​ಬಿ ಸೆಕ್ಯುರಿಟಿ ಸರ್ವಿಸ್​ನ ಮುಖ್ಯಸ್ಥ ಅಲೆಕ್ಸಾಂಡರ್ ಬ್ರೋತ್ನಿಕೋವ್ ತಿಳಿಸಿದ್ದಾರೆ.
ವಿಮಾನದಲ್ಲಿ ಸುಮಾರು 1 ಕೆ.ಜಿ. ತೂಕದ ಟಿಎನ್ ಟಿ ಯಿಂದ ಮಾಡಿದ ಕಚ್ಚಾ ಬಾಂಬ್ ಇರಿಸಲಾಗಿದ್ದು, ಈ ಬಾಂಬ್ ಸ್ಫೋಟದಿಂದ ವಿಮಾನ ಆಕಾಶದಲ್ಲೇ ಸ್ಫೋಟಗೊಂಡು ನೆಲಕ್ಕೆ ಅಪ್ಪಳಿಸಿದೆ. ಇದರಿಂದಾಗಿ ವಿಮಾನದ ಅವಶೇಷಗಳು ಹಲವು ಕಿ.ಮೀ. ವ್ಯಾಪ್ತಿಯಲ್ಲಿ ಚದುರಿ ಬಿದ್ದಿವೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಸಾಬೀತಾಗಿದೆ ಎಂದು ಭದ್ರತಾ ಮುಖ್ಯಸ್ಥ ಅಲೆಕ್ಸಾಂಡರ್ ಹೇಳಿದ್ದಾರೆ.
ಅಕ್ಟೋಬರ್ 31ರಂದು ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾದ ವಿಮಾನ ಸ್ಫೋಟಗೊಂಡಿತ್ತು. ವಿಮಾನದಲ್ಲಿ 224 ಪ್ರಯಾಣಿಕರಿದ್ದರು. ವಿಮಾನ ಪತನಕ್ಕೆ ತಾವೇ ಕಾರಣ ಎಂದು ಐಸಿಸ್ ಉಗ್ರರು ಹೊಣೆ ಹೊತ್ತುಕೊಂಡಿದ್ದರು.
ರಷ್ಯಾ ವಿಮಾನ ಸ್ಫೋಟಿಸಿದ ಉಗ್ರರ ನಿರ್ನಾಮ ಮಾಡುತ್ತೇವೆ: ವ್ಲಾಡಿಮಿರ್ ಪುಟಿನ್
ರಷ್ಯಾ ವಿಮಾನ ಸ್ಫೋಟಿಸಿ 224 ಅಮಾನಕರ ಸಾವಿಗೆ ಕಾರಣವಾದವರನ್ನು ರಷ್ಯಾದ ಯೋಧರು ಹುಡುಕಿ ನಿರ್ನಾಮ ಮಾಡಲಿದ್ದಾರೆ. ಭೂಮಿಯ ಯಾವುದೇ ಮೂಲೆಯಲ್ಲಿ ಅವರು ಅಡಗಿದ್ದರೂ ಸಹ ಅವರನ್ನು ಹುಡುಕಿ ಶಿಕ್ಷೆ ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ವಿಮಾನ ಪತನದ ಸಂಚಿನ ಮಾಸ್ಟರ್ ಮೈಂಡ್​ಗಳ ಸುಳಿವು ನೀಡಿದವರಿಗೆ 50 ಮಿಲಿಯನ್ ಅಮೆರಿಕನ್ ಡಾಲರ್ (330 ಕೋಟಿ ರೂ.) ಬಹುಮಾನ ನೀಡುವುದಾಗಿ ರಷ್ಯಾ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel