ವಾಷಿಂಗ್ ಟನ್: ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಅವರೊಂದಿಗೆ ಕಾಶ್ಮೀರ ವಿವಾದ ವಿಷಯವನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಜಾನ್ ಕೆರ್ರಿ, ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದು ಭಾರತ- ಪಾಕಿಸ್ತಾನಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ವಾಷಿಂಗ್ ಟನ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ, ರಹೀಲ್ ಷರೀಫ್ ಹಾಗೂ ಕೆರ್ರಿ ಅವರ ಭೇಟಿ ವೇಳೆ ಕಾಶ್ಮೀರ ವಿವಾದದ ಬಗ್ಗೆ ಮುಂಬೈ ದಾಳಿಯ ಬಗ್ಗೆ ಚರ್ಚೆ ನಡೆದಿದೆಯೇ ಎಂಬುದರ ಬಗ್ಗೆ ಅರಿವಿಲ್ಲ. ಮುಂಬೈ ನಲ್ಲಿ ಉಂಟಾಗಿರುವ ಸಾವು-ನೋವುಗಳ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿಸಿದೆ. ಆದರೆ ಪಾಕ್ ಸೇನಾ ಮುಖ್ಯಸ್ಥ ರಹೀಲ್ ಷರೀಫ್- ಕೆರ್ರಿ ನಡುವೆ ನಡೆದ ಮಾತುಕತೆಯ ಪ್ರತಿಯೊಂದು ವಿವರ ನನ್ನ ಬಳಿ ಇಲ್ಲ ಎಂದು ಜಾನ್ ಕಿರ್ಬಿ ತಿಳಿಸಿದ್ದಾರೆ.
ಕಾಶ್ಮೀರ ವಿವಾದವನ್ನು ಭಾರತ-ಪಾಕಿಸ್ತಾನ ಸರ್ಕಾರಗಳೇ ಬಗೆಹರಿಸಿಕೊಳ್ಳಬೇಕು, ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಅವರೊಂದಿಗೆ ನಡೆಸಿದ ಮಾತುಕತೆ ಬಗ್ಗೆ ಜಾನ್ ಕೆರ್ರಿ ಅವರೊಂದಿಗೆ ರಹೀಲ್ ಷರೀಫ್ ಮಾತುಕತೆ ನಡೆಸಿದ್ದಾರೆ ಎಂದು ಕಿರ್ಬಿ ತಿಳಿಸಿದ್ದಾರೆ.