ಸಾಂದರ್ಭಿಕ ಚಿತ್ರ 
ವಿದೇಶ

ಬೆಲ್ಜಿಯಮ್ ನಲ್ಲಿ ಶಂಕಿತ ಭಯೋತ್ಪಾದಕರ ಮೇಲೆ ಪೋಲಿಸ್ ದಾಳಿ; ೧೬ ಜನ ಬಂಧನ

ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಬೆಲ್ಜಿಯಂ ಪೊಲೀಸರು ೧೬ ಜನರನ್ನು ಬಂಧಿಸಿದ್ದು, ಪ್ಯಾರಿಸ್ ದಾಳಿಯ ಬಂಧೂಕುದಾರಿ ಸಲಾಹ್ ಅಬ್ದೇಸಲಾಮ್ ಅವರು ಇನ್ನೂ

ಬ್ರಸಲ್ಸ್: ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಬೆಲ್ಜಿಯಂ ಪೊಲೀಸರು ೧೬ ಜನರನ್ನು ಬಂಧಿಸಿದ್ದು, ಪ್ಯಾರಿಸ್ ದಾಳಿಯ ಬಂಧೂಕುದಾರಿ ಸಲಾಹ್ ಅಬ್ದೇಸಲಾಮ್ ಅವರು ಇನ್ನೂ ತಲೆಮರಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಸಲ್ಸ್ ಮತ್ತು ಚಾರ್ಲೆರಾಯ್ ನಲ್ಲಿ ಒಟ್ಟು ೨೨ ದಾಳಿಗಳನ್ನು ಭಾನುವಾರ ನಡೆಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ನವೆಂಬರ್ ೧೩ ರಂದು ಭಯೋತ್ಪಾದಕರು ಫ್ರಾನ್ಸ್ ನಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ೧೩೦ ಜನ ಮೃತಪಟ್ಟು ೩೫೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ಶಂಕಿತ ಭಯೋತ್ಪಾದಕರನ್ನು ಸೆರೆಹಿಡಿಯಲು ಪೊಲೀಸರು ಈ ದಾಳಿ ನಡೆಸಿದ್ದಾರೆ,

ಬ್ರಸಲ್ ನಲ್ಲಿ ಭಯೋತ್ಪಾದನೆ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ತಿಳಿಸಿದ್ದು, ವಿಶ್ವವಿದ್ಯಾಲಯಗಳು, ಶಾಲೆಗಳು ಮತ್ತು ಮೆಟ್ರೋವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಅಬ್ದೇಸಲಾಮ್ ನನ್ನು ಹಿಡಿಯಲು ವಾರಾಂತ್ಯದಲ್ಲಿ ಇಡಿ ಬ್ರಸಲ್ ಅನ್ನು ಪೊಲೀಸರು ತಹಬದಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT