ಸೆಕ್ಸ್ ವರ್ಕರ್ 
ವಿದೇಶ

ಗ್ರೀಸ್‌ನಲ್ಲಿ ಸ್ಯಾಂಡ್‌‌ವಿಚ್ ಬೆಲೆಗೆ ಸೆಕ್ಸ್ ಮಾರುತ್ತಿರುವ ಯುವತಿಯರು!

ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಗ್ರೀಸ್ ದೇಶದಲ್ಲಿ ಸೆಕ್ಸ್ ವರ್ಕರ್ ಗಳು ಸ್ಯಾಂಡ್‌‌ವಿಚ್ ಬೆಲೆಗೆ ಸೆಕ್ಸ್ ಮಾರುವಂತಾಗಿದೆ...

ಅಥೆನ್ಸ್: ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಗ್ರೀಸ್ ದೇಶದಲ್ಲಿ ಸೆಕ್ಸ್ ವರ್ಕರ್ ಗಳು ಸ್ಯಾಂಡ್‌‌ವಿಚ್ ಬೆಲೆಗೆ ಸೆಕ್ಸ್ ಮಾರುವಂತಾಗಿದೆ. 
ಕಳೆದ 6 ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಹೆಣಗಾಡುತ್ತಿರುವ ಗ್ರೀಸ್ ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಹಸಿವಿನ ಹಾಹಾಕಾರ ಮುಗಿಲುಮುಟ್ಟಿದೆ. ಸುಮಾರು 17000 ಸೆಕ್ಸ್ ವರ್ಕರ್ ಗಳು ಗ್ರೀಸ್ ನಲ್ಲಿದ್ದು, ಗ್ರೀಕ್ ಮಹಿಳೆಯರು ಯೂರೋಪ್ ನಲ್ಲಿ ಅತಿ ಹೆಚ್ಚು ಸೆಕ್ಸ್ ವ್ಯಾಪಾರದಲ್ಲಿ ತೊಡಗಿದ್ದಾರೆ. 
ಯೂರೋಪ್ ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಇಲ್ಲಿನ ಸೆಕ್ಸ್ ವರ್ಕರ್ ಗಳು ಯೂರೋಪ್ ನಲ್ಲೇ ಅತ್ಯಂತ ಕಡಿಮೆ ಬೆಲೆಗೆ ಸೆಕ್ಸ್ ಮಾರುತ್ತಿದ್ದಾರೆ. ಕೆಲ ಮಹಿಳೆಯರು ಕೇವಲ ಚೀಸ್, ಸ್ಯಾಂಡ್ ವಿಚ್ ಗಾಗಿ ಸೆಕ್ಸ್ ಸೇಲ್ ಮಾಡುತ್ತಿದ್ದಾರೆ. ಯಾಕೆಂದರೆ, ಅವರಿಗೆ ಊಟಕ್ಕೂ ಗತಿ ಇಲ್ಲ. ಹಸಿವಿನ ಆಕ್ರಂದನ ಸ್ಯಾಂಡ್ ವಿಚ್ ಬೆಲೆಗೆ ಸೆರಗು ಹಾಸುವ ಪರಿಸ್ಥಿತಿ ತಂದಿಟ್ಟಿದೆ ಎನ್ನುತ್ತಾರೆ ಅಥೆನ್ಸ್ ವಿಶ್ವವಿದ್ಯಾಲಯದ ಸೋಶಿಯಾಲಜಿ ಪ್ರೊಫೆಸರ್ ಗ್ರೆಗೋರಿ ಲ್ಯಾಕ್ಸೋಸ್.
ಗ್ರೀಸ್ ನಲ್ಲಿ ಆರ್ಥಿಕ ಸಂಕಷ್ಟ ಶುರುವಾಗುವುದಕ್ಕೂ ಮುನ್ನ ಒಬ್ಬ ವೇಶ್ಯೆಯ ಒಂದು ದಿನದ ಬೆಲೆ 53 ಯೂರೋ(3,750 ರು.) ಇತ್ತು. ಇದೀಗ, ಸ್ಯಾಂಡ್ ವಿಚ್ ಬೆಲೆ 2.12 ಯೂರೋ(150 ರು.)ಗೆ ಕುಸಿದಿದೆ ಎಂದು ಲಂಡನ್ ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿತಾಯಕ್ಕೆ ಸರ್ಕಾರ ಮುಂದು; ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತ?

ಜಪಾನಿನ ಮಿಲಿಟರಿ ಬಜೆಟ್ ಹೆಚ್ಚಾದರೆ ಭಾರತವೇಕೆ ಖುಷಿಪಡಬೇಕು? (ತೆರೆದ ಕಿಟಕಿ)

ಅಧಿಕಾರ ಹಸ್ತಾಂತರ ಗೊಂದಲ, ನಾಯಕರ ಹೇಳಿಕೆಗಳು: ವಿದೇಶಕ್ಕೆ ಹಾರಿದ ಸಿದ್ದು ಬಣದ 11 ಮಂದಿ 'ಕೈ' ಶಾಸಕರು

ಮುಸ್ಲಿಮರಿಗೆ ಗುಂಡು ಹೊಡೆಯುವ ವಿಡಿಯೋ: ಅಸ್ಸಾಂ ಬಿಜೆಪಿ ಸಾಮಾಜಿಕ ಮಾಧ್ಯಮದ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲು

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ!

SCROLL FOR NEXT