ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಒಬಾಮ
ಪ್ಯಾರಿಸ್: ಶೃಂಗದ ವೇಳೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಒಬಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಭಾರತದ ಹೊಣೆಗಾರಿಕೆಯನ್ನು ಪೂರೈಸುತ್ತೇವೆ ಎಂಬ ಭರವಸೆಯನ್ನೂ ಮೋದಿ ನೀಡಿದ್ದಾರೆ.
ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ, ಒಬಾಮ ಅವರ ಮುಕ್ತ ಮಾತುಕತೆಯನ್ನು ಶ್ಲಾಘಿಸಿದ ಮೋದಿ, ಇದರಿಂದ ಉತ್ತಮ ಬಾಂಧವ್ಯ ಏರ್ಪಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಭಾರತವು ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ಕೆಲಸವನ್ನು ಒಂದಾಗಿ ನಡೆಸಲಿದೆ ಎಂದೂ ಹೇಳಿದ ಪ್ರಧಾನಿ, 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಉದ್ದೇಶವನ್ನೂ ವಿವರಿಸಿದ್ದಾರೆ.
ಇದೇ ವೇಳೆ, ಸೌರ ಮೈತ್ರಿಯ ಯೋಜನೆ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ಇದರಿಂದ ಎಲ್ಲ ದೇಶಗಳೂ ಒಂದಾಗುವ ಕನಸು ನನಸಾಗಲಿದೆ ಎಂದಿದ್ದಾರೆ.