ಇಸ್ಲಾಮಾಬಾದ್: ಜಲಗಡಿಯನ್ನು ದಾಟಿದ ಆರೋಪದಡಿ ಪಾಕಿಸ್ತಾನ 100 ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಕರಾಚಿಯಲ್ಲಿರುವ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ(ಪಿಎಂಎಸ್ಎ) 12 ಭಾರತೀಯ ದೋಣಿಗಳನ್ನು ಜಫ್ತಿ ಮಾಡಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಮೀನುಗಾರರನ್ನು ಯಾವಾಗ ಬಂಧಿಸಲಾಗಿದೆ ಎಂಬ ಬಗ್ಗೆ ರೇಡಿಯೋ ಪಾಕಿಸ್ತಾನ ವರದಿ ಮಾಡಿಲ್ಲ.