ಡಮಾತುರು(ನೈಜೀರಿಯಾ): 'ದೇವರು ದೊಡ್ಡವನು' ಎಂದು ಕಿರಿಚಾಡುತ್ತಾ ಆತ್ಮಹತ್ಯಾ ಬಾಂಬ್ ದಾಳಿಕೋರರರು ನೈಜೀರಿಯದಲ್ಲಿ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 40 ಮಂದಿಯನ್ನು ಮೃತಪಟ್ಟಿದ್ದಾರೆ.
ಯೋಬೆ ರಾಜ್ಯದ ವಾಣಿಜ್ಯ ಕೇಂದ್ರವಾಗಿರುವ ಡಮಾತುರುನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಾರ್ಥನೆಗೆಂದು ಮಸೀದಿಗಳಲ್ಲಿ ಮುಸ್ಲಿಂರು ಸೇರಿದ್ದ ಸಂದರ್ಭದಲ್ಲಿ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರ ಸಂಘಟನೆಗೆ ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್ ಗಳು ಎರಡು ಮಸೀದಿ ಬಳಿ ಸ್ಪೋಟಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.
ಈಶಾನ್ಯ ನೈಜೀರಿಯದ ಯೋಬೆ ರಾಜ್ಯದ ಗ್ರಾಮೀಣ ಮಿಲಿಟರಿ ಶಿಬಿರದ ಮೇಲೆ ಬೋಕೋ ಹರಾಮ್ ಉಗ್ರರು ದಾಳಿ ನಡೆಸಿದರು. ಮಧ್ಯರಾತ್ರಿಯ ಬಳಿಕ ನಡೆದ ಈ ದಾಳಿಯನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದವು. ಈ ಸಂದರ್ಭದಲ್ಲಿ ನಡೆದ ಭೀಕರ ಕಾಳಗದಲ್ಲಿ 100ರಷ್ಟು ಬಂಡುಕೋರರು ಹತರಾದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಈ ಕಾಳಗದಲ್ಲಿ ಒಂಬತ್ತು ಭದ್ರತಾ ಪಡೆ ಸಿಬ್ಬಂದಿಗಳು ಮೃತಪಟ್ಟು ಇತರೇ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.