ಅಚ್ಚರಿಯ ಖಾಯಿಲೆಯಿಂದ ಬಳಲುತ್ತಿರುವ ಬಾಲಕಿ ಕ್ಯಾಟಲಿನ್ ಥಾರ್ನ್ಲೆ 
ವಿದೇಶ

ದಿನಕ್ಕೆ 12 ಸಾವಿರ ಬಾರಿ ಸೀನು!

ಆ್ಯಕ್ಷೀ...ಆ್ಯಕ್ಷೀ... ಪಕ್ಕದಲ್ಲಿರುವವರು ಒಂದೆರಡು ಬಾರಿ ಸೀನಿದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ, ಇಲ್ಲೊಬ್ಬಳು ದಿನಕ್ಕೆ ಬರೋಬ್ಬರಿ 12 ಸಾವಿರ ಬಾರಿ ಸೀನುತ್ತಾಳಂತೆ! ಅಚ್ಚರಿಯಾದರೂ ಇದು ಸತ್ಯ...

ಆಸ್ಟಿನ್: ಆ್ಯಕ್ಷೀ...ಆ್ಯಕ್ಷೀ... ಪಕ್ಕದಲ್ಲಿರುವವರು ಒಂದೆರಡು ಬಾರಿ ಸೀನಿದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ, ಇಲ್ಲೊಬ್ಬಳು ದಿನಕ್ಕೆ ಬರೋಬ್ಬರಿ 12 ಸಾವಿರ
ಬಾರಿ ಸೀನುತ್ತಾಳಂತೆ! ಅಚ್ಚರಿಯಾದರೂ ಇದು ಸತ್ಯ.

ಟೆಕ್ಸಾಸ್‍ನ 12 ವರ್ಷದ ಬಾಲಕಿ ಕ್ಯಾಟಲಿನ್ ಥಾರ್ನ್ಲೆಗಿರುವ ವಿಚಿತ್ರ ಕಾಯಿಲೆ, ಆಕೆಯ ನೆಮ್ಮ ದಿಯನ್ನು ಕಸಿದುಕೊಂಡಿದೆ. ಈಕೆ ಕಳೆದ ಒಂದು ತಿಂಗಳಿಂದ ನಿಮಿಷಕ್ಕೆ 20 ಬಾರಿಯಂತೆ, ದಿನಕ್ಕೆ 12 ಸಾವಿರ ಸಲ ಸೀನುತ್ತಾಳೆ. ಈಕೆಯ ಸೀನುವಿಕೆಗೆ ಕೊನೆಯೇ ಇಲ್ಲವಂತೆ. ಆರಂಭದಲ್ಲಿ ಕ್ಯಾಟಲಿನ್, ಏನೋ ಅಲರ್ಜಿಯಿಂದ ಸೀನುವಿಕೆ ಶುರುವಾಗಿರಬಹುದು, ಒಂದೆರಡು ದಿನದಲ್ಲಿ ಗುಣವಾಗಬಹುದು ಎಂದೇ ಭಾವಿಸಿದ್ದಳು. ಆದರೆ, ದಿನಕಳೆದಂತೆ ಇದು ಗಂಭೀರ ಸಮಸ್ಯೆಯಾಗಿ ಮಾರ್ಪಾಡಾಯಿತು.

ಪರಿಣಾಮ, ಈ ಬಾಲಕಿಯ ಕಾಲುಗಳು ದುರ್ಬಲವಾಗತೊಡಗಿವೆ, ಕಿಬ್ಬೊಟ್ಟೆ ನೋವು ಶುರುವಾಗಿದೆ. ಈವರೆಗೆ 6 ಮಂದಿ ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ಪಡೆದರೂ ಸಮಸ್ಯೆ ಪರಿಹಾರವಾಗಿಲ್ಲ. ನಿರಂತರ ಸೀನುವಿಕೆಗೆ ಕಾರಣವೇನು ಎಂಬುದೂ ತಿಳಿದುಬಂದಿಲ್ಲ ಎಂದು ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ. ಇಡೀ ದಿನದಲ್ಲಿ ನಿದ್ರಿಸಿದಾಗ ಮಾತ್ರ ಕ್ಯಾಟಲಿ ನ್ ಸೀನುವುದಿಲ್ಲವಂತೆ. ಹಾಗಾಗಿ, ನಾನು ಶಾಂತಿಯಿಂದ ನಿದ್ರಿಸುವುದನ್ನೊಮ್ಮೆ ನಾನೂ ನೋಡಬೇಕು ಎನ್ನುತ್ತಾಳೆ ಕ್ಯಾಟಲಿನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video