ಲಂಡನ್: ತನ್ನ ಎರಡು ವರ್ಷದ ಮಗ ಮುಳುಗುತ್ತಿದ್ದಾಗ ತನ್ನ ಫೋನಿನಲ್ಲಿ ಫೇಸ್ಬುಕ್ ನೋಡುತ್ತಿದ್ದಳು ಎಂದು ಸಾಬೀತಾಗಿದ್ದು, ಬ್ರಿಟನ್ ಮಹಿಳೆಯೊಬ್ಬಳಿಗೆ ಐದು ವರ್ಷಜ ಜೈಲು ಸಜೆಯಾಗಿದೆ ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ.
೩೧ ವರ್ಷದ ಮಹಿಳೆ ಕ್ಲಾರಿ ಬಾರ್ನೆಟ್ ಅವರದ್ದು ಸರಿಯಾದ ಪೋಷಕ ವರ್ತನೆಯಲ್ಲ ಎಂದು ನ್ಯಾಯಧೀಶ ಹೇಳಿದ್ದಾರೆ. ಮಾರ್ಚ್ ೧೭ ೨೦೧೪ ರಂದು ಮನೆಯ ತೋಟದಲ್ಲಿದ್ದ ಕೊಳಕ್ಕೆ ಬಿದ್ದ ಜೋಷುವಾ ಬಾರ್ನೆಟ್ ಮೃತಪಟ್ಟಿದ್ದ.
ಈ ಮಗು ಸಾಯುವಾಗ ಮಹಿಳೆ ತನ್ನ ಫೋನಿನಲ್ಲಿ ಫೇಸ್ಬುಕ್ ನೋಡುತ್ತಿದ್ದಳು. ನಂತರ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಫಲವಾಗದೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತ್ತು.
ವಿಚಾರಣೆ ವೇಳೆಯಲ್ಲಿ ಈ ಘಟನೆಯಾದಾಗ ನಡೆದಿದ್ದನ್ನೆಲ್ಲಾ ಮಹಿಳೆ ಪೊಲೀಸರಿಗೆ ತಿಳಿಸಿದ್ದಳು.
"ನಿಮ್ಮ ಬೇಜವಾಬ್ದಾರಿತನದಿಂದ ನಿಮ್ಮ ಮಗ ಸತ್ತಿದ್ದಾನೆ. ನಿಮ್ಮ ಜೀವನಪೂರ್ತಿ ಈಗ ಇದರ ಜೊತೆಯೇ ಬದುಕಬೇಕು. ಈ ರೀತಿಯ ಪೋಷಕರ ವರ್ತನೆ ಸರಿಯಲ್ಲ " ಎಂದು ನ್ಯಾಯಾಧೀಶ ಹೇಳಿದ್ದಾರೆ.