ಇಸ್ಲಾಮಾಬಾದ್: ಚರ್ಚಾ ವಿಷಯದ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದ ವಿಷಯವಿಲ್ಲದಿದ್ದರೆ ಭಾರತದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ವಿಷಯದಲ್ಲಿ ಕಾಶ್ಮೀರದ ವಿಷಯವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಂತಹ ಚರ್ಚೆಗೂ ಬರುವುದಿಲ್ಲ ಎಂದು ಪಾಕ್ ನ ಸರ್ಕಾರಿ ಮತ್ತು ಮಿಲಿಟರಿ ನಾಯಕತ್ವ ಹೇಳಿರುವುದಾಗಿ ಅಲ್ಲಿನ ಪತ್ರಿಕೆ 'ದ ನೇಶನ್' ವರದಿ ಮಾಡಿದೆ. ಪ್ರಧಾನಿ ನವಾಜ್ ಷರೀಫ್ ನಾಯಕತ್ವದಲ್ಲಿ ಉನ್ನತ ಮಟ್ಟದ ಸಭೆ ಮುಗಿದ ಬಳಿಕ ಪಾಕ್ ನ ಈ ನಿರ್ಣಯ ಹೊರಬಿದ್ದಿದೆ.
ಜಮ್ಮು-ಕಾಶ್ಮೀರ ಗಡಿಭಾಗದಲ್ಲಿ ಉಗ್ರಗಾಮಿಗಳ ಚಲನವಲನಗಳ ಕುರಿತು ತಪಾಸಣೆ ನಡೆಸಲು ಮಿಲಿಟರಿ ಪಡೆ ಸರ್ಕಾರಕ್ಕೆ ನೆರವು ನೀಡಬೇಕೆಂದು ಕೋರಲಾಗಿದೆ. ಉನ್ನತ ಸಭೆಗೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಪ್ರಧಾನಿ ಶರೀಫ್ ಜೊತೆ ಮಾತುಕತೆ ನಡೆಸಿದ್ದರು.ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ವಿಷಯ ಕುರಿತು ಭಾರತದ ಜೊತೆ ಮಾಡಿಕೊಳ್ಳಬೇಕಾದ ವಿಷಯಗಳ ಕುರಿತು ನಿರ್ಧರಿಸಲಾಯಿತು ಎಂದು ಇಸ್ಲಾಮಾಬಾದ್ ನ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ವಿಷಯವನ್ನು ಬಿಟ್ಟು ಮಾತುಕತೆಗೆ ಬನ್ನಿ ಅಂತ ಪಾಕಿಸ್ತಾನ ಕರೆಯುತ್ತಿದೆ. ಆದರೆ ಕಾಶ್ಮೀರಿಗರಿಗೆ ದ್ರೋಹ ಮಾಡಲು ನಾವು ಸಿದ್ಧರಿಲ್ಲ. ಕಾಶ್ಮೀರ ವಿಷಯ ಚರ್ಚೆಗೆ ಬರದಿದ್ದರೆ ಆ ಮಾತುಕತೆ ಸಂಪೂರ್ಣವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.