ಖಡ್ಗ ಪ್ರಸಾದ್ ಶರ್ಮಾ ಒಲಿ ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆ
ಹೊಸ ಸಂವಿಧಾನದ ಮೂಲಕ ಹಿಂದೂ ರಾಜಪ್ರಭುತ್ವದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದ ನೇಪಾಳ ರಾಷ್ಟ್ರಕ್ಕೆ ನೂತನ...
ಕಠ್ಮಂಡು: ಹೊಸ ಸಂವಿಧಾನದ ಮೂಲಕ ಹಿಂದೂ ರಾಜಪ್ರಭುತ್ವದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದ ನೇಪಾಳ ರಾಷ್ಟ್ರಕ್ಕೆ ನೂತನ ಪ್ರಧಾನಿಯಾಗಿ ಖಡ್ಗ ಪ್ರಸಾದ್ ಶರ್ಮಾ ಒಲಿ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಸಿಪಿಎನ್ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಅವರಿಗೆ 598 ಸದಸ್ಯರ ಪೈಕಿ 338 ಮತಗಳು ದೊರಕಿದ್ದು, ನೇಪಾಳದ 38ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ನೇಪಾಳದ ಹಾಲಿ ಪ್ರಧಾನಿಯಾಗಿದ್ದ ಸುಶೀಲ್ ಕೊಯಿರಾಲಾ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶನಿವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಪ್ರಧಾನಿ ಆಯ್ಕೆಗೆ ಮತ್ತೆ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಶೀಲ್ ಕೊಯಿರಾಲಾ ಅವರಿಗೆ 249 ಮತಗಳು ದೊರಕಿವೆ.
ನೂತನ ಪ್ರಧಾನಿ ಒಲಿಗೆ ಮೋದಿ ಅಭಿನಂದನೆ
ನೇಪಾಳದ 38ನೇ ಪ್ರಧಾನಿಯಾಗಿ ಒಲಿ ಅವರು ಆಯ್ಕೆಯಾಗುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.