ವಿದೇಶ

ಭಾರತ ಗಲಭೆ ಪೀಡಿತ ದೇಶ ಎಂದ ಅಮೆರಿಕ ವರದಿ

Srinivasamurthy VN

ನವದೆಹಲಿ: ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾಂತಂತ್ರ್ಯದ ಬಗ್ಗೆ ಅಮೆರಿಕ ಕಾಂಗ್ರೆಸ್ ನೀಡಿರುವ ೨೦೧೪ರ ವರದಿಗೆ ಭಾರತ ಹೆಚ್ಚಿನ ಮಹತ್ವ ನೀಡದೆ ನಿರ್ಲಕ್ಷ್ಯ ತೋರಿದೆ.

ಅಮೆರಿಕದ ಆಡಳಿತ ಮಂಡಳಿಯ ಈ ಆಂತರಿಕ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಕಾರಣಗಳಿಗೆ ಹತ್ಯೆಗಳು, ಬಂಧನಗಳು, ಕೋಮುಗಲಭೆಗಳು ಮತ್ತು ಜ್ವಲಂತ ಚರ್ಚೆಗಳು ಹೆಚ್ಚಾಗಿವೆ  ಎಂದು ಉಖಿಸಲಾಗಿದೆ. “ದೇಶದ ಸಂವಿಧಾನ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಪ್ರಜೆಗಳಿಗೂ ಸಮಾನ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಲ್ಪಿಸಿದೆ. ಯಾರೇ ಎಲ್ಲೆ ಮೀರಿದಲ್ಲಿ ಅದನ್ನು ನಿಯಂತ್ರಿಸಲು ನ್ಯಾಯಾಂಗ, ಪತ್ರಿಕಾ ಮಾಧ್ಯಮ, ಮಾನವ ಹಕ್ಕು ಆಯೋಗಗಳಿವೆ. ಆದ್ದರಿಂದ ಆ ವರದಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ" ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಬಾತ್ಮಿದಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಇದೇ ವೇಳೆ ಈ ಸಭೆಗೆ ನಿಯೋಜಿತರಾಗಿರುವ ಅಮೆರಿಕದ ರಾಯಭಾರಿ ಡೇವಿಡ್ ಸ್ಯಾಪರ್ ಸ್ಟೀನ್ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಮೋದಿ ಸರ್ಕಾರದ ಸಹಿಷ್ಣುತೆ ಮತ್ತು ನಾಗರೀಕ ವರ್ತನೆಗಳನ್ನು ಕಾರ್ಯಾನುಷ್ಟಾನಕ್ಕೆ ತರಲು ಅಮೆರಿಕ ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ. ಈ ವರದಿ ಯುಪಿಎ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನ ಅವಧಿಯದಾಗಿದ್ದು, ಕಳೆದ ವರ್ಷ ಮೇ  ೨೬ರ ವರೆಗಿನ ಘಟನೆಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

SCROLL FOR NEXT