ವಾಷಿಂಗ್ಟನ್ : ಅತೀ ಪ್ರಬಲ ಚಂಡಮಾರುತ ಪೆಟ್ರಿಶಿಯಾ ಮೆಕ್ಸಿಕೋ ಕರಾವಳಿಯತ್ತ ದಾಳಿಯಿಟ್ಟಿದೆ. 165 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ ಶನಿವಾರ ಬೆಳಗ್ಗೆ 6.15ಕ್ಕೆ ಕರಾವಳಿಗೆ ಅಪ್ಪಳಿಸಿತ್ತು. ಈಗಾಗಲೇ ಮೆಕ್ಸಿಕೋ ಕರಾವಳಿಯಲ್ಲಿ ಜನರನ್ನು ಸ್ಥಳಾಂತರ ಮಾಡಿದ್ದು, ಚಂಡಮಾರುತ ನುಗ್ಗಿ ಬರಲಿರುವ ಹಾದಿಯಲ್ಲಿರುವ ಮೂರು ರಾಜ್ಯಗಳಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
2013ರಲ್ಲಿ 6300 ಜನರ ಸಾವಿಗೆ ಕಾರಣವಾದ ಹಯಾನ್ ಚಂಡಮಾರುತದ ಅದೇ ರೂಪವನ್ನು ಪೆಟ್ರಿಶಿಯಾ ಹೊಂದಿದೆ ಎಂದು ಹೇಳಲಾಗುತ್ತಿದೆ.
ಗಂಟೆಗೆ 300 ಕಿಮೀ ವೇಗದಲ್ಲಿ ಸಂಚರಿಸುತ್ತಾ ಗಾಳಿ ಕರಾವಳಿಯಲ್ಲಿ ಬೀಸಿದ್ದು, ಇನ್ನು ಹೆಚ್ಚು ಪ್ರಬಲವಾಗಿ ಬೀಸುವ ಸಾಧ್ಯತೆ ಇದೆ.
ಮೆಕ್ಸಿಕೋ ದಾಟಿದ ನಂತರ ಅಮೆರಿಕದ ಟೆಕ್ಸಾಸ್‌ಗೆ ಪೆಟ್ರಿಶಿಯಾ ಲಗ್ಗೆ ಇಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.