ಕಿಗಲಿ: ದಕ್ಷಿಣ ಆಫ್ರಿಕಾದ ರಾವಂಡಾದಲ್ಲಿರುವ ಗಿತರಾಮ ಜೈಲು ಪ್ರಪಂಚದಲ್ಲೇ ಅತಿ ಭಯಾನಕ ಕಾರಾಗೃಹವಾಗಿದೆ.
ಈ ಜೈಲಿನಲ್ಲಿ ಸುಮಾರು 600 ಕೈದಿಗಳು ಇರುವಷ್ಟು ಮಾತ್ರ ಸ್ಥಳವಿದೆ. ಆದರೆ ಇಲ್ಲಿ 6 ಸಾವಿರದಿಂದ 7 ಸಾವಿರ ಕೈದಿಗಳನ್ನು ಕೂಡಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.ಒಂದು ರಾತ್ರಿ ಈ ಜೈಲಿನಲ್ಲಿ ಉಳಿದು ಕೊಂಡು ಜೀವಂತವಾಗಿ ವಾಪಸ್ ಬಂದರೆ ಪವಾಡ ನಡೆದಂತೆ.
ಸ್ಥಳದ ಆಭಾವದಿಂದ ಇಲ್ಲಿನ ಖೈದಿಗಳು ನಿಂತುಕೊಂಡೆ ಬಹುತೇಕ ಸಮಯವನ್ನು ಕಳೆಯುತ್ತಾರೆ. ಇಲ್ಲಿನ ಕೆಲ ಕೈದಿಗಳ ನಡುವೆ ಆಗಾಗ್ಗೆ ಮಾರಣಾಂತಿಕ ಜಗಳಗಳು ನಡೆಯುತ್ತವೆ. ಈ ವೇಳೆ ಸತ್ತ ಕೈದಿಗಳ ದೇಹವನ್ನು ಇತರ ಕೈದಿಗಳು ತಿನ್ನುತ್ತಾರಂತೆ.
ಪ್ರತಿದಿನ ಸುಮಾರು ಏಳರಿಂದ 8 ಮಂದಿ ಈ ಕಾರಾಗೃಹದಲ್ಲಿ ಸಾಯುತ್ತಾರಂತೆ. ಇನ್ನೂ ಈ ಜೈಲಿನ ಅನೇಕ ಕೈದಿಗಳು ಕುಷ್ಟರೋಗದಿಂದ ಬಳಲುತ್ತಿದ್ದರೂ ಅವರೆಲ್ಲಾ ಬರಿಗಾಲಲ್ಲೇ ನಡೆಯುತ್ತಾರೆ.
ಈ ಜೈಲಿನ ನರಕ ಯಾತನೆ ವಿರುದ್ಧ ಅನೇಕ ಮಾನವ ಹಕ್ಕು ಸಂಘಟನೆಗಳು ಹೋರಾಟ ನಡೆಸುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಬದಲಾವಣೆ ಆಗಿಲ್ಲ.