ಪ್ಯಾರಿಸ್: ಸಿರಿಯಾದ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಫ್ರಾನ್ಸ್ ವೈಮಾನಿಕ ದಾಳಿಗೆ ಮುಂದಾಗಿದೆ. ಐಎಸ್ ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಮೈತ್ರಿಪಡೆಯೊಂದಿಗೆ ಕೈಜೋಡಿಸಲು ತೀರ್ಮಾನಿಸಿರುವ ಫ್ರಾನ್ಸ್, ಈ ನಿರ್ಧಾರ ಕೈಗೊಂಡಿದೆ ಎಂದು ಇಲ್ಲಿನ `ಲೀ ಮಂಡೆ' ಪತ್ರಿಕೆ ವರದಿ ಮಾಡಿದೆ.
ಆದರೆ, ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ನಿರಾಕರಿಸಿರುವ ಅಧಿಕಾರಿಗಳು, ಅಧ್ಯಕ್ಷ ಫ್ರಾಂಕೋಸ್ ಹಾಲಂಡ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ನಿರ್ಧಾರ ಪ್ರಕಟಿಸಲಿದ್ದಾರೆ ಎಂದಿದ್ದಾರೆ. ಇರಾಕ್ ದಾಳಿ ವೇಳೆ ಅಮರಿಕ ಪಡೆಗಳೊಂದಿಗೆ ಕೈಜೋಡಿಸಿದ ಮೊದಲ ದೇಶವಾಗಿದ್ದ ಫ್ರಾನ್ಸ್, ಸಿರಿಯಾ ವಿಷಯ ದಲ್ಲಿ ಅಂಥ ಕ್ರಮ ಅಧ್ಯಕ್ಷ ಬಷಾರ್ ಅಲ್ ಅಸದ್‍ಗೆ ಅನು ಕೂಲಕರವಾಗಬಹುದು ಎಂದು ದೂರ ಉಳಿದಿತ್ತು.
ಬದಲಾಗಿ ಅಸದ್ ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡು ತ್ತಿದ್ದ ಖುರ್ದೀಶ್ ಪಡೆಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿ ತ್ತು. ಆದರೆ, ಇದೀಗ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಯುರೋಪಿನಲ್ಲಿ ಸೃಷ್ಟಿಯಾಗಿರುವ ವಲಸಿಗರ ಸಮಸ್ಯೆ, ಅಲ್ಲಿ ಹೆಚ್ಚುತ್ತಿರುವ ರಷ್ಯಾದ ಪ್ರಭಾವ ಫ್ರಾನ್ಸ್ ತನ್ನ ನಿರ್ಧಾರವನ್ನು ಪುನರ್ ಪರಿಗಣಿಸುವಂತೆ ಮಾಡಿವೆ.