ವ್ಯಾಟಿಕನ್ ಸಿಟಿ: ತಮ್ಮ ಜೀವಮಾನದ ಪ್ರಥಮ ಅಮೆರಿಕ ಪ್ರವಾಸಕ್ಕೆ ಫೋಪ್ ಫ್ರಾನ್ಸಿಸ್ ಸಜ್ಜಾಗಿದ್ದಾರೆ. ಇದೇ ತಿಂಗಳಲ್ಲಿ ಅಮೆರಿಕಕ್ಕೆ ಪ್ರಯಾಣಿಸಲಿರುವ ಅವರು ವಾಷಿಂಗ್ಟನ್, ನ್ಯೂಯಾರ್ಕ್ ಮತ್ತು ಫಿಲೆಡೆಲ್ಫಿಯಗೆ ಭೇಟಿ ನೀಡಲಿದ್ದಾರೆ.
ಈ ಮೊದಲು 16ನೇ ಬೆನೆಡಿಕ್ಟ್ ಮತ್ತು 2ನೇ ಜಾನ್ ಪಾಲ್ ಫೋಪ್ ಪೀಠಕ್ಕೇರುವ ಮುನ್ನ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಅತಿಹೆಚ್ಚು ರೋಮನ್ ಕ್ಯಾಥೊಲಿಕ್ ಕ್ರೈಸ್ತರಿರುವ ಜಗತ್ತಿನ 4ನೇ ದೇಶ ಅಮೆರಿಕವಾಗಿದ್ದು 78 ವರ್ಷಗಳ ದೀರ್ಘ ಕಾಯುವಿಕೆ ನಂತರ ಫ್ರಾನ್ಸಿಸ್ ಅಮೆರಿಕಗೆ ಕಾಲಿಡಲಿದ್ದಾರೆ.
ಮೊದಲು ಬರುತ್ತಿರುವ ಅವರು ಕೊಂಚ ನರ್ವಸ್ ಆಗಿದ್ದಾರೆಂದು ನಿಯೋಜಕ ತಿಮೋತಿ ಡೊಲಾನ್ ಅಭಿಪ್ರಾಯಪಟ್ಟಿ ದ್ದಾರೆ. ಈಗಾಗಲೇ ಅವರು ಅಮೆರಿಕದ ಭೂಪಟಗಳನ್ನು ಹಿಡಿದು ತಮ್ಮ ಪ್ರವಾಸ ವಿವರಗಳ ಬಗ್ಗೆ ವಿವರ ಸಂಗ್ರಹಿಸಿದ್ದಾರೆ.