ವಿದೇಶ

ಪ್ರಿಯತಮೆ ಮೇಲೆ ದೈಹಿಕ ಹಲ್ಲೆ ಮಾಡಿದ ಭಾರತೀಯನಿಗೆ ಸಿಂಗಾಪುರದಲ್ಲಿ ಜೈಲು

Mainashree

ಸಿಂಗಾಪುರ್ : ತನ್ನ ಪ್ರೇಯಸಿಯ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಸಿಂಗಾಪುರದ ನ್ಯಾಯಲಯ 8 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ತಮಿಳುನಾಡು ಮೂಲದ ಶ್ರೀ ಮುರುಗ ಸುಬ್ಮಣಿಯನ್(44) ಶಿಕ್ಷಗೆ ಒಳಗಾದವರು.ತನ್ನ ಮಾಜಿ ಗಂಡನ ಭಾವಚಿತ್ರವನ್ನು 31 ವರ್ಷದ ಪ್ರೇಯಸಿ ರಾಧಿಕ ರಾಜವರ್ಮಾ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಸುಬ್ರಮಣಿಯನ್ ಪ್ರಿಯತಮೆಯ ಮೇಲೆ ಆಗಾಗ ಜಗಳ ತೆಗೆಯುತ್ತಿದ್ದ ಅಲ್ಲದೆ ಸಿಗರೇಟ್‍ನಿಂದ ಆಕೆಯ ಕೆನ್ನೆಯನ್ನು ಸುಟ್ಟಿದ್ದ.ಇದು ಪೋಲಿಸ್ ಠಾಣೆಯ ಮೆಟ್ಟಿಲು ಏರಿದ್ದರು.

ಪ್ರಕರಣ ನ್ಯಾಯಲದ ಮೆಟ್ಟಿಲು ಏರಿ ನ್ಯಾಯಾಲಯದಿಂದ 8 ತಿಂಗಳ ಶಿಕ್ಷೆ ಮತ್ತು 4 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮುರುಗನ್ ತನ್ನ ಸ್ನೇಹಿತರ ಜತೆಗೂಡಿ ರಾಧಿಕಾಳನ್ನು ಊಟಕ್ಕೆ ಆಹ್ವಾನಿಸಿದ್ದ. ಇದಕ್ಕೆ ಒಲ್ಲೆ ಅಂದ ಆಕೆಯನ್ನು ಎಲ್ಲರ ಮುಂದೆಯೇ ಹಲ್ಲೆ ಮಾಡಿದ. ಇದರಿಂದ ಆಕೆ ತನ್ನ ಅಪಾರ್ಟ್‍ಮೆಂಟ್‍ಗೆ ಹೋಗಿ ಬಾಗಲಿ ಹಾಕಿಕೊಂಡಿದ್ದಳು. ಪೋಲಿಸರು ಬಂದು ದೂರು ದಾಖಲಿಸಿಕೊಂಡಿದ್ದರು.

SCROLL FOR NEXT