ಅಮೆರಿಕಾದಲ್ಲಿ ಜನಾಂಗೀಯ ಹಲ್ಲೆಗೆ ಒಳಗಾದ ಇಂದರ್ಜಿತ್ ಸಿಂಗ್ ಮಕ್ಕರ್ 
ವಿದೇಶ

ಅಮೆರಿಕಾದಲ್ಲಿ ಸಿಖ್ ನಾಗರಿಕನ ಮೇಲೆ ತೀವ್ರ ಹಲ್ಲೆ

ಶಿಕಾಗೋದಲ್ಲಿ ನಡೆದ ಈ ದ್ವೇಷಪೂರಿತ ಹಿಂಸೆಯಲ್ಲಿ ಹಿರಿಯ ಸಿಕ್ ನಾಗರಿಕನನ್ನು 'ಭಯೋತ್ಪಾದಕ' ಮತ್ತು 'ಬಿನ್ ಲ್ಯಾಡೆನ್' ಎಂದು ಕರೆದು ಅವರ ಮೇಲೆ ತೀವ್ರ ಹಲ್ಲೆ

ನ್ಯೂಯಾರ್ಕ್: ಶಿಕಾಗೋದಲ್ಲಿ ನಡೆದ ಈ ದ್ವೇಷಪೂರಿತ ಹಿಂಸೆಯಲ್ಲಿ ಹಿರಿಯ ಸಿಕ್ ನಾಗರಿಕನನ್ನು 'ಭಯೋತ್ಪಾದಕ' ಮತ್ತು 'ಬಿನ್ ಲ್ಯಾಡೆನ್' ಎಂದು ಕರೆದು ಅವರ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದು ಸೆಪ್ಟಂಬರ್ ೧೧ರ ದಾಳಿಯ ವಾರ್ಷಿಕ ದಿನದ  ಕೆಲವೇ ದಿನಗಳ ಮುಂಚೆ ಈ ಘಟನೆ ನಡೆದಿದೆ.

ಮಂಗಳವಾರ ಇಂದ್ರಜಿತ್ ಸಿಂಗ್ ಮಕ್ಕರ್ ಅವರ ಕಾರಿನ ಬಳಿ ತೆರಳಿದ ಕಿಡಿಗೇಡಿ, 'ಭಯೋತ್ಪಾದಕ, ನಿನ್ನ ದೇಶಕ್ಕೆ ಹಿಂದಿರುಗು, ಬಿನ್ ಲ್ಯಾಡೆನ್' ಎಂದು ಕರೆದಿರುವುದಲ್ಲದೆ, ಜನಾಂಗೀಯ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ.

ದಿನಸಿ ಅಂಗಡಿಗೆ ಕಾರಿನಲ್ಲಿ ತೆರಳುತ್ತಿದ್ದರು ಇಬ್ಬರು ಮಕ್ಕಳ ತಂದೆ ಮಕ್ಕರ್ ಅವರಿಗೆ ಮತ್ತೊಂದು ಕಾರಿನಲ್ಲಿ ಚಲಿಸುತ್ತಿದ್ದ ಚಾಲಕ ನಿರಂತರವಾಗಿ ಅಡ್ಡಿಪಡಿಸುತ್ತಿದ್ದಾಗ, ತನ್ನ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಆಗ ಕಿಡಿಗೇಡಿ ಚಾಲಕ ಮಕ್ಕರ್ ಅವರ ವಾಹನದ ಬಳಿ ಬಂದು ಮುಖಕ್ಕೆ ತೀವ್ರವಾಗಿ ಗುದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಕ್ಕರ್ ಪ್ರಜ್ಞೆ ಕಳೆದುಕೊಂಡಿದ್ದಾರೆ.

ನಂತರ ಮಕ್ಕರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗಿದೆ. ಈಗ ಶಂಕಿತನ್ನು ಬಂಧಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

"ಅಧಿಕಾರಿಗಳಿಗೆ ಧನ್ಯವಾದಗಳು. ಯಾವ ಅಮೇರಿಕನ್ನನೂ ತನ್ನ ಧರ್ಮವನ್ನು ಪಾಲಿಸುವುದರಿಂದ ಹಿಂಜರಿಯಬಾರದು" ಎಂದು ಮಕ್ಕರ್ ಹೇಳಿದ್ದಾರೆ.

ಈ ಘಟನೆ ಸಿಖ್ ಸಂಘಟನೆಗಳನ್ನು ಬೆಚ್ಚಿ ಬೀಳಿಸಿದೆ. ಸಿಖ್ ಧರ್ಮೀಯರ ವಿರುದ್ಧ ಅಮೆರಿಕಾದಲ್ಲಿ ಈ ರೀತಿಯ ಜನಾಂಗೀಯ ಹಲ್ಲೆಗಳು ಹೆಚ್ಚಿರಿವುದು ಅಲ್ಲಿನ ಸಮುದಾಯದಲ್ಲಿ ಆತಂಕ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ